ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಸ್ಫಾಕ್ ಉಲ್ಲಾಖಾನ್‍ಐಕ್ಯತೆಯ ಸಂಕೇತಗಳು”


ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.20: “ದೇಶದ ಬಿಡುಗಡೆಗಾಗಿಧರ್ಮದ ಗಡಿಗಳನ್ನು ಮೀರಿಒಂದಾಗಿ ಹೋರಾಟ ಮಾಡಿದ ಕ್ರಾಂತಿಕಾರಿಗಳು ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಸ್ಫಾಕ್‍ ಉಲ್ಲಾಖಾನ್‍ ಐಕ್ಯತೆಯ ಸಂಕೇತಗಳು.ಬ್ರಿಟಿಷರು ಎಷ್ಟೇ ಪ್ರಯತ್ನ ಪಟ್ಟರೂ ಇವರ ಒಗ್ಗಟ್ಟನ್ನು ಮುರಿಯಲು ಸಾಧ್ಯವಾಗಲಿಲ್ಲ. ಇಂದು ದೇಶಕ್ಕೆ ಕಂಟಕವಾಗಿರುವ ಧರ್ಮ, ಜಾತಿ, ಪ್ರಾದೇಶಿಕತೆಯ ಗಡಿಗಳನ್ನು ಮೀರಲು ಸ್ವತಂತ್ರ ಸಂಗ್ರಾಮದ ಕ್ರಾಂತಿಕಾರಿಗಳ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕಿದೆ” ಎಂದು ಎಐಡಿವೈಓ ಜಿಲ್ಲಾ ಸದಸ್ಯ ಪಾಲಾಕ್ಷ ಹಡಗಲಿ ಕರೆ ನೀಡಿದರು.
ಹೊಸಪೇಟೆಯ ಸಂಕ್ಲಾಪುರದ ಮೇಟ್ರಿಕ್ ನಂತರದ ಹಾಸ್ಟೇಲ್‍ನಲ್ಲಿ‘ ಕಾಕೋರಿ ಹುತಾತ್ಮರ ದಿನ’ವನ್ನುಎಐಡಿವೈಓ (ಆಲ್‍ಇಂಡಿಯಾಡೆ ಮಾಕ್ರೇಟಿಕ್‍ಯೂತ್‍ ಅರ್ಗನೈಷೇಷನ್) ಯುವಜನ ಸಂಘಟನೆಯ ವತಿಯಿಂದ ಆಚರಿಸುವ ಸಂದರ್ಭದಲ್ಲಿ ಯುವಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಸಿಪಾಯಿದಂಗೆಯ ಪೂರ್ವದ ಸಮಾಜದಲ್ಲಿ ಒಗ್ಗಟ್ಟು ಇರುವ ಕಾರಣ ಸಿಪಾಯಿದಂಗೆಯಲ್ಲಿ ದೆಹಲಿಯ ಸುಲ್ತಾನರನ್ನುತಮ್ಮ ನಾಯಕನೆಂದು ಆಯ್ಕೆ ಮಾಡಿಕೊಂಡು ಕಂಪನಿಯ ಸೈನ್ಯದೊಂದಿಗೆ ಹೋರಾಡುತ್ತಾರೆ.ಬ್ರಿಟೀಷ್ ಆಡಳಿತದೊಂದಿಗೆ ಧರ್ಮದಆಧಾರದ ಮೇಲೆ ಒಡೆದಾಳುವ ನೀತಿಗೆ ಉತ್ತೇಜನ ದೊರೆತು ಜನತೆಯನ್ನು ಒಗ್ಗೂಡದಂತೆ ಕೋಮುವಾದದ ರಾಜಕಾರಣ ಆರಂಭವಾಗುತ್ತದೆ. ಇಂತಹ ವಾತಾವರಣದಲ್ಲಿ ಸಮಾಜವಾದಿ ವ್ಯವಸ್ಥೆಕಟ್ಟುವ ಆಶಯದೊಂದಿಗೆ ಸೇರಿದ ಕ್ರಾಂತಿಕಾರಿಗಳು ಸೌಹಾರ್ಧತೆಗೆ ಮಾದರಿಯಾಗುತ್ತಾರೆ.”ಎಂದು ಪಾಲಾಕ್ಷ ಹಡಗಲಿ ಅವರುಚರಿತ್ರೆಯ ಸಂಗತಿಗಳನ್ನು ಬಚ್ಚಿಟ್ಟರು.
“ಸಾಂಪ್ರದಾಯಸ್ಥ ಕುಟುಂಬಗಳಿಂದ ಬಂದ ಕ್ರಾಂತಿಕಾರಿಗಳಿಗೆ ಧರ್ಮ ಒಗ್ಗಟ್ಟಿಗೆ ಅಡ್ಡಿಯಾಗಲಿಲ್ಲ ಮತ್ತು ಧರ್ಮವನ್ನು ಎಂದೂ ರಾಜಕಾರಣದ ಭಾಗವನ್ನಾಗಿಸಿಕೊಳ್ಳಲಿಲ್ಲ. ಜೈಲಿನಲ್ಲಿ ಬಂಧಿತರಾದಾಗ ಧರ್ಮದ ಆಧಾರದ ಮೇಗಿವರಿಬ್ಬರ ಒಗ್ಗಟ್ಟನ್ನು ಮುರಿಯಲು ಬಂದವರು ವಿಫಲರಾಗಿ ಹೋದರು.ಇಂತಹ ಅಚಲ ಒಗ್ಗಟ್ಟು ಇಂದಿನ ಯುವಕರಿಗೆ ಬೇಕಾದ ಜರೂರು ಇದೆ” ಎಂದು ಅಭಿಷೇಕ್ ಕಾಳೆ ಎಐಡಿವೈಓ ಜಿಲ್ಲಾ ಸದಸ್ಯರು ಅಭಿಪ್ರಾಯಪಟ್ಟರು.
“ಜನರ ಧ್ವನಿಯಂತಿದ್ದ ಕ್ರಾಂತಿಕಾರಿಗಳದ್ದು ರಾಜಿರಹಿತ ಪಂಥವಾಗಿದ್ದು, ಸಮರಶೀಲ ಹೋರಾಟಕ್ಕೆ ಮುಂದಾಗುತ್ತಿದ್ದರು.ಶ್ರೀಮಂತರ, ದೇಶಿ ರಾಜರ ಹಾಗೂ ಕಾರ್ಪೋರೇಟ್ ಮನೆತನಗಳ ಪ್ರತಿನಿಧಿಯಾಗಿದ್ದ ರಾಜಿಪರ ಪಂಥವು ಸಂಧಾನ, ಮಾತುಕತೆಗೆ ಮತ್ತು ಚೌಕಾಸಿಗೆ ಮುಂದಾಗುತ್ತಿತ್ತು.ಸಂಗ್ರಾಮದ ಕೊನೆಯ ಘಟ್ಟದಲ್ಲಿ ರಾಜಿಪರ ಪಂಥಕ್ಕೆ ಮೇಲುಗೈಯಾದ ಕಾರಣ ದೇಶವು ಶ್ರೀಮಂತ ಬಂಡವಾಳ ಶಾಹಿಗಳ ಪಾಲಾಗಿ ಇಂದುದೇಶದಲ್ಲಿ ಬಡತನ, ನಿರುದ್ಯೋಗ, ಅಪೌಷ್ಠಿಕತೆ, ಆತ್ಮಹತ್ಯೆಗಳು ನಿರಂತರವಾಗಿದೆ.ಸ್ವತಂತ್ರ ಪೂರ್ವದಲ್ಲಿದ್ದ ಕೋಮುವಾದ, ಜಾತಿವಾದ, ಪ್ರಾಂತೀಯವಾದ, ಅಸ್ಪೃಶ್ಯತೆ, ಲೈಂಗಿಕ ದೌರ್ಜನ್ಯಗಳು ಕಡಿಮೆಯಾಗದೇಉಲ್ಬಣಿಸುತ್ತೀವೆ” ಎಂದು ಕಲ್ಮೇಶ್‍ಗುದಿಗೆ ನವರ್‍ ಎಐಡಿವೈಓ ಜಿಲ್ಲಾ ಸದಸ್ಯರು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕೆ ಬಾಷಾ ಇವರು ಕಾಕೋರಿ ಹುತಾತ್ಮರಿಗೆ ಮಾಲಾರ್ಪಣೆ ಮಾಡಿದರು.ಪಾಲಾಕ್ಷ ಹಡಗಲಿ ಇವರು ಬಂಗಾಲಿ ಹಾಡನ್ನು ಪ್ರಸ್ಥುತ ಪಡಿಸಿದರು.ನೂರಾರು ಯುವಕರು ಭಾಗವಹಿಸಿದ್ದರು ಎಂದು ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ಎಱ್ರಿಸ್ವಾಮಿ ತಿಳಿಸಿದ್ದಾರೆ.