ರಾಮ್ ಚರಣ್ ದಂಪತಿ ಮಗುವಿಗೆ ಶುಭಾಶಯಗಳ ಮಹಾಪೂರ

ಹೈದರಾಬಾದ್,ಜೂ.೨೧-ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ನಿನ್ನೆಯಷ್ಟೇ ಹೆಣ್ಣು ಮಗು ಜನಿಸಿದೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗುವಿನ ಜೋಡಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುದ್ದಾದ ಮಗುವಿಗೆ ಭರಪೂರ ಶುಭಹಾರೈಕೆಗಳು ಬರುತ್ತಿವೆ .


ಒಂದು ವಾರದ ಹಿಂದೆಯಷ್ಟೇ ತಾನು ತನ್ನ ಮಗುವಿಗಾಗಿ ಸಾಮಾನು ಖರೀದಿ ಮಾಡಿದ್ದನ್ನು ಮತ್ತು ಪ್ರಜ್ವಲ್ ಫೌಂಡೇಶನ್ ತನ್ನ ಮಗುವಿಗೆ ವಿಶೇಷ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದನ್ನು ಎಂದು ಉಪಾಸನಾ ಹೇಳಿದರು. ಪ್ರಜ್ವಲ್ ಫೌಂಡೇಶನ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಮರದಿಂದ ಮಾಡಿದ ಈ ವಿಶೇಷ ತೊಟ್ಟಿಲನ್ನು ಉಪಾಸನಾ ಮಗುವಿಗಾಗಿ ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗಿದೆ. ಇದು ಪೆಂಡೆಂಟ್ ಹೊಂದಿದ್ದು, ಕುಸುರಿ ಕಲೆಯಿಂದ ಅಲಂಕರಿಸಲಾಗಿದೆ ಎನ್ನಲಾಗಿದೆ.
ರಾಮ್ ಚರಣ್ ತೇಜಾ ಅವರ ಮೊದಲ ಮಗುವಿನ ಜನನ ಯಾವ ದೇಶದಲ್ಲಿ ಎಂದು ಸಾಕಷ್ಟು ಚರ್ಚೆಯಾಗಿತ್ತು. ಅವರು ಅಮೆರಿಕದಲ್ಲಿ ತನ್ನ ಮೊದಲ ಮಗುವಿನ ಜನನಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿತ್ತು. ಪತ್ನಿ ಉಪಾಸನಾ ಅವರ ಸಲಹೆ ಮೇರೆಗೆ ರಾಮ್ ಚರಣ್ ಇಂತಹ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿತ್ತು.. ಈ ಎಲ್ಲಾ ಊಹಾಪೋಹಗಳಿಗೆ ಉತ್ತರಿಸಿದ ಉಪಾಸನಾ.
ಅಮೆರಿಕದಲ್ಲಿ ಹೆರಿಗೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಸುಳ್ಳು. ಅದು ಏಕೆ ಈ ರೀತಿ ಹರಡಿತು ಎಂದು ನನಗೆ ತಿಳಿದಿಲ್ಲ. ನಮ್ಮ ಮಗು ಭಾರತದಲ್ಲಿ ಹುಟ್ಟುತ್ತದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ. ನಮ್ಮ ಮಗು ಭಾರತದಲ್ಲಿ ಹುಟ್ಟುತ್ತದೆ ಎಂದು ಹೇಳಿದರು.
ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಡವಾಗಿ ಮಗು ಪಡೆಯಲು ನಿರ್ಧರಿಸಿದ್ದರು. ಹಲವು ವರ್ಷಗಳ ನಂತರ ಉಪಾಸನಾ ಮಡಿಲಿಗೆ ಮಗುವೊಂದು ಬಂದಿದೆ. ಆದ್ದರಿಂದ ಸಹಜವಾಗಿಯೇ ಮಗು ದೊಡ್ಡ ಆಸ್ಪತ್ರೆಯಲ್ಲಿ ಜನಿಸುತ್ತದೆ ಎಂದು ಊಹಿಸಲಾಗಿತ್ತು. ಅಮೆರಿಕದ ವೈದ್ಯರ ಬಗ್ಗೆ ರಾಮ್ ಚರಣ್ ಮಾತನಾಡಿದ ಬಳಿಕ ಮಗು ಅಮೆರಿಕದಲ್ಲಿ ಹುಟ್ಟುತ್ತದೆ ಎಂದು ಅಂದಾಜಿಸಲಾಗಿತ್ತು. ಇದಕ್ಕೆಲ್ಲ ಉಪಾಸನಾ ಪ್ರತಿಕ್ರಿಯಿಸಿದ್ದಾರೆ. ಕೊನೆಗೆ ಆಕೆ ತಮ್ಮ ಆಸ್ಪತ್ರೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ.