ರಾಮೋತ್ಸವ: ಭರದ ಸಿದ್ದತೆ ಪೂರ್ಣ: ಸನಾತನಿಗಳನ್ನು ಕೈ ಬೀಸಿ ಕರೆಯುತ್ತಿದೆ ರಾಮಲೀಲಾ ಉತ್ಸವ ಸಮಿತಿ

ಬೀದರ್: ಜ.21:ಇಂದು ಹಾಗೂ ನಾಳೆ ನಾಡಿನ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್ ಜಿಲ್ಲೆಯಲ್ಲಿ ಅಯೋಧ್ಯಯಲ್ಲಿ ಜರುಗಲಿರುವ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ರಾಮೋತ್ಸವ ಕಾರ್ಯಕ್ರಮ ಸಡಗರ ಹಾಗೂ ಸಂಭ್ರಮದಿಂದ ಜರುಗುತ್ತಿದೆ.
ನಗರದ ನೆಹರು ಕ್ರೀಡಾಂಗಣದ ಎದುರಿರುವ ಸಾಯಿ ಸ್ಕೂಲ್ ಗ್ರೌಂಡ್‍ನಲ್ಲಿ ಜಿಲ್ಲೆಯ ಮಠಾಧೀಶರ ಒಕ್ಕೂಟ, ರಾಮಲೀಲಾ ಉತ್ಸವ ಸಮಿತಿ ಹಾಗೂ ಜಿಲ್ಲೆಯ ರಾಮ ಭಕ್ತರಿಂದ ಜರುಗಲಿರುವ ಈ ಬೃಹತ್ ಕಾರ್ಯಕ್ರಮದ ತಯ್ಯಾರಿ ಭರದಿಂದ ಸಾಗುತ್ತಿದೆ.
ಬೀದರ್ ನಗರದಲ್ಲಿ ರಾಮನ ಭಾವಚಿತ್ರವುಳ್ಳ ಕಟೌಟ್‍ಗಳು ರಾರಾಜಿಸುತ್ತಿದ್ದು, ಬೃಹತ್ತಾದ ಪೆಂಡಾಲ್ ನಿರ್ಮಿಸಲಾಗುತ್ತಿದೆ. ಸುಮಾರು 40+64 ಅಳತೆಯ ವೇದಿಕೆ ನಿರ್ಮಿಸಲಾಗುತ್ತಿದ್ದು, ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕಲಾ ತಂಡದಿಂದ ಜೈ ಶ್ರೀ ರಾಮ ಸಂಗೀತ ದರ್ಬಾರ ಜರುಗಲಿದೆ. ನಾಳೆ(22.ಜನೆವರಿ) ಸಹ ಸಂಜೆ 5 ಗಂಟೆಗೆ ಶ್ರೀರಾಮನಿಗೆ ರುದ್ರಾಭಿಷಕ, 498 ಶ್ರೀರಾಮ ವೇಷಧಾರಿಯುಳ್ಳ ಮಕ್ಕಳ ಮೇಲೆ ಪುಷ್ಪವರ್ಷ, ಸಾಮೂಹಿಕ ಹನುಮಾನ ಚಾಲಿಸಾ ಪಠಣ, ಕರಸೇವಕರಿಗೆ ಸನ್ಮಾನ, ಸಂತರ ಆಶಿರ್ವಚನ, ತದನಂತರ ರಾಮ ದರ್ಬಾರದಲ್ಲಿ ಲವ ಹಾಗೂ ಕುಶ ಎಂಬ ಇಬ್ಬರು ಮಕ್ಕಳು 16 ನಿಮಿಷಗಳ ಕಾಲ ಸಂಪೂರ್ಣ ರಾಮಾಯಣ ಗೀತ ಗಾಯನ ನಡೆಸುವರು.

ಈ ಎಲ್ಲ ಅಪರೂಪ ಹಾಗೂ ಅತ್ಯಾದ್ಭುತ ಕಾರ್ಯಕ್ರಮಗಳಿಗೆ ಜಿಲ್ಲೆಯ ಎಲ್ಲ ಸನಾತನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಮುಖ್ಯ ಸಂಯೋಜಕರು ಹಾಗೂ ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕರ ಸೇವಕರು ರಾಮೋತ್ಸವದಲ್ಲಿ ಪಾಲ್ಗೊಳ್ಳಲು ಠಾಕುರ್ ಕರೆ
ಬೀದರ್: 1990-91, 1991-92ರಲ್ಲಿ ರಾಮಜನ್ಮ ಭುಮಿಗಾಗಿ ಹೋರಾಡಿದ ಕರ ಸೇವಕರು ಜಿಲ್ಲೆಯ ಮಠಾಧೀಶರ ಒಕ್ಕೂಟ, ರಾಮಲೀಲಾ ಉತ್ಸವ ಸಮಿತಿ ಹಾಗೂ ಜಿಲ್ಲೆಯ ಎಲ್ಲ ರಾಮಭಕ್ತರ ಪರವಾಗಿ ಹಮ್ಮಿಕೊಳ್ಳುತ್ತಿರುವ ಇಂದಿನ(21/01/2024) ರಾಮೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೌರವ ಸತ್ಕಾರ ಸ್ವೀಕರಿಸಬೇಕೆಂದು ಬಿಜೆಪಿ ಕಲಬುರಗಿ ಸಹ ಪ್ರಭಾರಿ ಈಶ್ವರಸಿಂಗ್ ಠಾಕುರ ಮನವಿ ಮಾಡಿದರು.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, ರಾಮಜನ್ಮ ಭೂಮಿಗಾಗಿ ಹೋರಾಡಿದ ಪ್ರತಿಫಲವೇ ಇಂದು ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿದೆ. ಇದಕ್ಕೆ ಶ್ರಮವಹಿಸಿ ಅಂದಿನ ಉಭಯ ಸರ್ಕಾರಗಳಿಂದ ಲಾಠಿ ಏಟು ತಿಂದು ಅಯೋಧ್ಯ ರಥಯಾತ್ರೆಯಲ್ಲಿ ಪಾಲ್ಗೊಂಡ ಸಹಸ್ರಾರು ಕರ ಸೇವಕರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಆದ ಕಾರಣ ನಮ್ಮ ಈ ಮನವಿಗೆ ಮನ್ನಣೆ ನೀಡಿ ಇದೇ ಅಮಂತ್ರಣವೆಂದು ತಿಳಿದು ಇಂದು ಹಾಗೂ ನಾಳೆ(22 ಜನೆವರಿ) ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮಿಂದ ಗೌರವ ಸನ್ಮಾನ ಸ್ವೀಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ 9448445086 ಈ ದೂರವಾಣಿಯನ್ನು ಸಂಪರ್ಕಿಸಬೇಕೆಂದು ಠಾಕೂರ ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.