ರಾಮೋತ್ಸವ ನಿಮಿತ್ತ ಧರಿ ಹನುಮಾನ ಕ್ಷೇತ್ರದಲ್ಲಿ 21 ಸಾವಿರ ಜ್ಯೋತಿ ಪ್ರಜ್ವಲನೆ

ಔರಾದ :ಜ.23: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಅದ್ಭುತ ಕಾರ್ಯ ನೆರವೇರಿರುವುದು ಸಂತೋಷ ತಂದಿದೆ. 500 ವರ್ಷಗಳ ಇತಿಹಾಸ ಕ್ಕೆ ಈ ದಿನ ಮೆರಗು ತಂದಿದೆ ಎಂದು ತಹಸಿಲ್ದಾರ್ ಮಲ್ಲ ಶೆಟ್ಟಿ ಚಿದ್ರೆ ನುಡಿದರು.

ಸೋಮವಾರ ರಾತ್ರಿ ರಾಮೋತ್ಸವ ನಿಮಿತ್ಯ ತಾಲೂಕಿನ ಧರಿ ಹನುಮಾನ ಸುಕ್ಷೇತ್ರದಲ್ಲಿ ಜರುಗಿದ 21,000 ಸಾವಿರ ಜ್ಯೋತಿ ಪ್ರಜ್ವಲನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಡೀ ರಾಷ್ಟ್ರವೇ ಕಾತುರದಿಂದ ಅಯೋಧ್ಯೆ ಕಡೆಗೆ ತಿರುಗಿ ನೋಡಿದಂತಾಗಿದೆ. ಈ ಸುಂದರ ಕ್ಷಣಗಳನ್ನು ಇಡೀ ರಾಷ್ಟ್ರವೇ ಕಣ್ತುಂಬ ನೋಡಿ ಪಾವನವಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು ಎಲ್ಲರೂ ರಾಮಲಲ್ಲನ ಭಜನೆ, ಪೂಜೆ ಪುನಸ್ಕಾರ ಮಾಡಿ ಎಲ್ಲರೂ ಇಡೀ ದಿನ ರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದ ನಿಮಿತ್ಯ ಸಹಸ್ರಾರು ಭಕ್ತರು ಬಂದು ಶ್ರೀರಾಮರಿಗೆ ಸಂಬಂಧಿಸಿದಂತೆ ರಂಗೋಲಿ ಗಳನ್ನು ಹಾಕುವ ಮೂಲಕ ಗಮನ ಸೆಳೆದರು. ಇಡೀ ಧರಿ ಹನುಮಾನ ಕ್ಷೇತ್ರ ರಾಮೋತ್ಸವದಲ್ಲಿ ಮುಳುಗಿ ಮಿಂದೆದ ದೃಶ್ಯಗಳು ಕಂಡು ಬಂದವು. ನಂತರ ಎಲ್ಲಾ ಭಕ್ತರು 21,000 ಹಣತೆಗಳನ್ನು ಹಚ್ಚುವ ಮೂಲಕ ಭಾವೈಕ್ಯತೆ ಮೆರೆದರು.

ಕಾರ್ಯಕ್ರಮದ ಪ್ರಯುಕ್ತ ಜ್ಞಾನಭಾರತಿ ಗುರಕುಲಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.ಜ್ಯೋತಿ ಪ್ರಜ್ವಲನೆ ಕಾರ್ಯಕ್ರಮದಲ್ಲಿ ಲಾಧಾ ಗ್ರಾಮದ ಆರತಿ ಕಾರ್ತಿಕ ಹಿರೇಮಠ್ ಹಾಗೂ ಮುಸ್ತಾಪೂರ ಗ್ರಾಮದ ಮಂಜುನಾಥ ಹಾಗೂ ಶೆಂಬೆಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರ ಶ್ರೀರಾಮಚಂದ್ರ ಭಾವಚಿತ್ರವುಳ್ಳ ರಂಗೋಲಿಗಳು ಎಲ್ಲರ ಮನಸೂರೆ ಗೊಳಿಸಿದವು.

ಎಲ್ಲರಿಗೂ ಹುಗ್ಗಿ ಅನ್ನ ಸಾಂಬಾರಿನ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಜಯಕುಮಾರ ಪಾಟೀಲ ಯರನಳ್ಳಿ, ಪ್ರಕಾಶ ಮರ್ತುಳೆ ನಂದಿ ನಾಗುರ್, ಭೋಜ ರೆಡ್ಡಿ, ಬಸವರಾಜ ಮಾನುರೇ, ಗುರುನಾಥ ದೇಶಮುಖ, ಶರಣಯ್ಯ ಸ್ವಾಮಿ, ಸುನಿಲ ಮಾನುರೇ, ಶಿವುಕುಮಾರ ಪಾಟೀಲ್, ವಿರರ್ಶೆಟ್ಟಿ ಪಾಟೀಲ್, ಬಾಬುರಾವ್, ಮಾರುತಿ ಪಾಂಚಾಳ್, ಮಧುಕರ್ , ಶಿವಾನಂದ ಕೋಟೆ, ಕಲ್ಲಪ್ಪ ಪಾಂಚಾಳ ಇದ್ದರು.