ರಾಮೋತ್ಸವಕ್ಕೆ ಚಾಲನೆ

ಕಲಬುರಗಿ,ಏ.10:ಹೊಸ ಜೇವರ್ಗಿ ರಸ್ತೆಯಲ್ಲಿರುವ ಶ್ರೀರಾಮಮಂದಿರದಲ್ಲಿ ಪಂ.ವೆಂಕಣ್ಣಾಚಾರ ಪೂಜಾರ ಮಳಖೇಡ ಅವರು ರಾಮೋತ್ಸವ 2024 ಕ್ಕೆ ದೀಪ ಪ್ರಜ್ವಲಿಸುವದರ ಮೂಲಕ ಚಾಲನೆ ನೀಡಿದರು .
ಪ್ರತಿದಿನ ಸಾಯಂಕಾಲ 6.30ರಿಂದ 7.30 ರ ವರೆಗೆ ರಾಮನವಮಿ ತನಕ ಅವರಿಂದ ಶ್ರೀಮದ್ರಾಮಾಯಣ ಪ್ರವಚನ ಇರುತ್ತದೆ ಎಂದು ಆಡಳಿತ ಮಂಡಳಿಯ ಸದಸ್ಯ ಕಿಶೋರ ದೆಶಪಾಂಡೆ ತಿಳಿಸಿದರು.
ವ್ಯಾಸರಾಜ ಸಂತೇಕೆಲೂರ,ವಿದ್ಯಾಧರ ಭಟ್,ವಿಜಯಕುಮಾರ,ಅರ್ಚಕ ನಾಗರಾಜ್ ಆಚಾರ್ಯ,ಮಂದಿರದ ವ್ಯವಸ್ಥಾಪಕ ನಿರಂಜನ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.