ರಾಮೇಶ್ವರ ಗ್ರಾಮದಲ್ಲಿ ರಥೋತ್ಸವದ ಸಂಭ್ರಮ

ಹೊನ್ನಾಳಿ.ಏ.3; ರಾಮೇಶ್ವರ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಕುಮಾರರಾಮ ಸ್ವಾಮಿ ‍ ದೇವರ ವಾರ್ಷಿಕ ರಥೋತ್ಸವದ ಕಾರ್ಯಕ್ರಮಕ್ಕೆ  ಮುಂಜಾನೆ 7:30ಕ್ಕೆ ಚಾಲನೆ ದೊರೆಯಿತು. ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಕುಮಾರರಾಮಸ್ವಾಮಿಗೆ ‍ ವಿಶೇಷ ಪೂಜೆ ನೆರವೇರಿಸಿ,  ಬಳಿಕ ದೇವರ ಉತ್ಸವ ಮೂತಿಯನ್ನು ಅಲಂಕೃತ ಮಾಡಿ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ನಂತರದಲ್ಲಿ ರಥಕ್ಕೆ ಪೂಜೆ ಸಲ್ಲಿಸಿ   ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಕುಮಾರರಾಮಸ್ವಾಮಿಗೆ ‍  ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು.  ಮಹಾರಥದಲ್ಲಿ ಪ್ರತಿಷ್ಟಾಪನೆಯ ನಂತರ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ನೀಡಲಾಯಿತು.  ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆರು. ಭಕ್ತರು ದೇವರಿಗೆ ಹಣ್ಣು ಕಾಯಿ  ಸಮರ್ಪಿಸಿ ರಥೋತ್ಸವನ್ನು  ಸುಮಾರು ಸಾವಿರರು ಭಕ್ತರು ರಥವನ್ನು ಎಳೆಯುವ ಮೂಲಕ ಸ್ವಾಮಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು . ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಪ್ಪ. ಡಿ ಗಂಗಾಧರಪ್ಪ ದೇವಿಕೊಪ್ಪ. ಎ ಪರಮೇಶ್ವರಪ್ಪ. ಡಿ ರಾಮಗೌಡ್ರು. ಹೆಚ್ ತೀರ್ಥಲಿಂಗಪ್ಪ. ಚಂದ್ರಪ್ಪ ಪಾಟೀಲ್   ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮದ ಭಕ್ತಾದಿಗಳು ಪಾಲ್ಗೊಂಡಿದ್ದರು.