ರಾಮುಲು  ಸಹಕಾರ ಕೋರಿದ ಜನಾರ್ಧನರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.09 ಮಾಜಿ ಸಚಿವ ಜನಾರ್ಧನರೆಡ್ಡಿ ಅವರು. ಕೊಪ್ಪಳದ ಮಾಜಿ ಸಂಸದ ಹೆಚ್.ಜಿ.ರಾಮುಲು ಅವರನ್ನು ಗಂಗಾವತಿಯ ನಿವಾಸದಲ್ಲಿ ಭೇಟಿ ಮಾಡಿ ಪ್ರಸಕ್ತ ಚುನಾವಣೆಯಲ್ಲಿ ತಮಗೆ ಸಹಕಾರ ನೀಡುವಂತೆ ಕೋರಿದ್ದಾರಂತೆ.
ಹೆಚ್.ಆರ್.ಶ್ರೀನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಣೆ ನಂತರ ಜನಾರ್ಧನರೆಡ್ಡಿ ಅವರು ಭೇಟಿ ಮಾಡಿದ್ದು ಹಲವು ಊಹಾಪೋಹಗಳಿಗೆ ಎಡೆ‌ಮಾಡಿಕೊಟ್ಟಿದೆ.
ಹಿರಿಯರಾದ ತಾವು ಈ ಬಾರಿ ನನಗೆ ಸಹಕಾರ ಮಾಡಿ ಮುಂದಿನ‌ ದಿನಗಳಲ್ಲಿ ನಾನು ಎಲ್ಲಾ ರೀತಿಯ ಸಹಕಾರವನ್ನು ನೀಡುವೆ. ಕಾಂಗ್ರೆಸ್ ಹಾಗು ಬಿಜೆಪಿಗೆ ಪಾಠ ಕಲಿಸಲು ನಿಮ್ಮಂತಹ ಹಿರಿಯರ ಸಹಕಾರ ಅಗತ್ಯ ಎಂದು ರೆಡ್ಡಿ ಕೋರಿದ್ದಾರಂತೆ.
ರಾಮುಲು ಅವರು ಏನು ಭರವಶೆ ನೀಡಿದ್ದಾರೆಂಬುದು ನಿಗೂಡವಾಗಿದೆ.
ಅಂತೂ ಶತಾಯ ಗತಾಯ ತಾನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಯಬೇಕೆಂದು ಹೊರಟಿರುವ ರೆಡ್ಡಿ ಏನೆಲ್ಲ ಸಾದ್ಯತೆಗಳನ್ನು ಬಳಸಿಕೊಳ್ಳವ ಪ್ರಯತ್ನ ನಡೆಸಿದ್ದಾರೆಂಬುದನ್ನು ಈ ದೃಶ್ಯ ಸಾಕ್ಷೀಕರಿಸುತ್ತಿದೆ.