ರಾಮಾಯಣ, ಮಹಾಭಾರತ ಭಾರತೀಯರ ಪ್ರಮುಖ ಗ್ರಂಥಗಳು: ಎಸ್.ಸಿ ಇಂಡಿ

ಇಂಡಿ: ಮಾ.31:ಕರ್ನಾಟಕ ಸಂಸ್ಕøತ ವಿಶ್ವವಿಧ್ಯಾಲಯ ಮತ್ತು ಸಂಸ್ಕøತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಹಾಗೂ ವೃಷಭಲಿಂಗಾರ್ಯ ಕೃಪಾ ಪೋಷಿತ ಸಂಸ್ಕøತ ಪಾಠ ಶಾಲೆ ಬೋಳೆಗಾಂವ ಇವರ ಸಂಯುಕ್ತಾಶ್ರಯದಲ್ಲಿ ಶ್ರೀಮದ್ ವಾಲ್ಮೀಕಿ ರಾಮಾಯಣ ಆಧಾರಿತ ಶ್ರೀರಾಮೋತ್ಸವ ಕಾರ್ಯಕ್ರಮ ಜರುಗಿತು.
ಈ ಸಂಧರ್ಭದಲ್ಲಿ ಸಂಸ್ಕøತ ಪಾಠ ಶಾಲೆಯ ಮಖ್ಯೋಪಾಧ್ಯಾಯ ಎಸ್ ,ಸಿ ಇಂಡಿ ಮಾತನಾಡಿ ರಾಮಾಯಣ ಮಹಾಭಾರತ ಭಾರತೀಯರ ಪ್ರಮುಖ ಗ್ರಂಥಗಳು ಇವುಗಳಿಂದ ದೇಶದ ಸಂಸ್ಕøತಿ ಪರಂಪರೆ ಆಚಾರ ವಿಚಾರಗಳನ್ನು ದೇಶಕ್ಕೆ ನೀಡಿ ಜಗತ್ತಿನಲ್ಲಿಯೇ ಶ್ರೀಮಂತ ಸಂಸ್ಕøತಿಯನ್ನಾಗಿ ಮಾಡಿವೆ.
ರಾಮಾಯಣದಲ್ಲಿ ಬರುವ ಶ್ರೀರಾಮಚಂದ್ರ ಹಾಗೂ ಲಕ್ಮಣನ ಆದರ್ಶ ಹಾಗೂ ಸೀತಾಮಾತೆಯ ಭಕ್ತಿ ಇಡೀ ಮಾನದ ಬದುಕಿಗೆ ದಾರಿದೀಪವಾಗಿವೆ. ವಾಲ್ಮೀಕಿ ಬರೆದ ರಾಮಾಯಣದಲ್ಲಿ ಭಕ್ತಿಯ ರಸ ತುಂಬಿದರೆ ಮಹಾಭಾರತದಲ್ಲಿ ಪಾಂಡವರ ಸತ್ಯ ,ನ್ಯಾಯ, ನೀತಿ ಧರ್ಮ ಪರಿಪಾಲನೆ ಕಂಡು ಬರುತ್ತದೆ.
ಅಧುನಿಕ ಜಗತ್ತಿನ ದಿನಮಾನಗಳಲ್ಲಿ ಯುವ ಸಮುದಾಯ ಬೇರೆ ಕಡೆ ವಾಲುತ್ತಿರುವದರಿಂದ್ದ ಇಂತಹ ನೀತಿ ಕಥೆಗಳು ಬಹಳ ಅವಶ್ಯಕವಾಗಿವೆ.
ಮಹಾತ್ಮಾಗಾಂಧಿಜೀಯವರ ಬದುಕಿನಲ್ಲಿ ಸತ್ಯ ಹರಿಶ್ಚಂದ್ರನ ,ಮತ್ತು ಶ್ರವಣಕುಮಾರನ ಪುಸ್ತಕಗಳೇ ಪ್ರೇರಣೆಯಾಗಿವೆ. ಮನುಷ್ಯನ ಮಾನವೀಯ ಮೌಲ್ಯಗಳಿಗೆ ಇಂತಹ ರಾಮಾಯಣ ,ಮಹಾಭಾರತದಂತ ಗ್ರಂಥಗಳು ದಾರೀಪವಾಗಿವೆ ಎಂದರು.

ಮನುಷ್ಯನ ಸುಂದರವಾದ ಬದಕಿಗೆ ರಾಮಾಯಣ ಗ್ರಂಥ ಇಂದು ಪ್ರಸ್ತುತ. ಭಾರತ ದೇಶದಲ್ಲಿ ಅನೇಕ ಮಹಾನ್ ದಾರ್ಶನಿಕ ಯುಗ ಪುರುಷರು ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಧಾನ, ಧರ್ಮ ಪರಿಪಾಲನೆ, ನ್ಯಾಯ, ಸತ್ಯ , ಸಹಿಷ್ಣತೆ ಇಂತಹ ಗ್ರಂಥಗಳು ಕಲಿಸುತ್ತವೆ  ಎಂದು  ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಎಸ್.ಎಸ್  ಹಿರೇಮಠ ಮಾತನಾಡಿದರು  

ಆರ್ ಜೆ ಕೋಳೆಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮ ಅಧ್ಯಕ್ಷತೆ ಎಸ್ .ಎಸ್ ಹಿರೇಮಠ ವಹಿಸಿದರು, ಎಂ.ಎ ಹುಣಸಗಿ, ಎಸ್ .ಜಿ ಕಟ್ಟಿಮನಿ, ಎ.ಎಸ್ ವರಕನಹಳ್ಳಿ ಇದ್ದರು.
ಎಸ್.ಸಿ ಇಂಡಿ ಸ್ವಾಗತಿಸಿ,ಆಯ್.ಎ ಹುಣಸಗಿ ನಿರೂಪಿಸಿ . ಎಸ್ .ಎಂ ಅಂಗಡಿ ವಂದಿಸಿದರು.