“ರಾಮಾಯಣ ಜಗತ್ತಿನ ಶ್ರೇಷ್ಠ ಗ್ರಂಥ” : ಶ್ರೀ ಗುರುಲಿಂಗ ಸ್ವಾಮೀಜಿಗಳು

ಸಂಜೆವಾಣಿ ವಾರ್ತೆ,
ವಿಜಯಪುರ,ಜ.29 :ರಾಮಾಯಣ ಮತ್ತು ಮಹಾಭಾರತಗಳು ವಿಶ್ವಕ್ಕೆ ಮಾದರಿಯಾದ ಎರಡು ಪವಿತ್ರ ಗ್ರಂಥಗಳು ಇವತ್ತಿಗೂ ಮಾದರಿಯಾಗಿವೆ. ರಾಮಾಯಣ ಕೇವಲ ಕಥೆಯಲ್ಲ. ಅದು ಒಂದು ಮನಃಶಾಸ್ತ್ರದ ಗ್ರಂx.À ರಾಮಾಯಣದಲ್ಲಿ ಎಲ್ಲ ಪ್ರಸಂಗಗಳು ಆದುದ್ದೆಲ್ಲ ಒಳ್ಳೆಯದಕ್ಕೆ ಎಂಬ ದಿವ್ಯ ಸಂದೇಶ ನೀಡುತ್ತವೆ” ಎಂದು ಜ್ಞಾನ ಯೋಗಾಶ್ರಮದ ಪೂಜ್ಯರಾದ ಶ್ರೀ ಗುರುಲಿಂಗ ಸ್ವಾಮಿಗಳು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ರಾಮಾಯಣ ಪ್ರಸಂಗ ಕುರಿತು ನಡೆದ ಚಿಂತನೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದ ಸಾಹಿತಿಗಳು ಮತ್ತು ವೈದ್ಯರು ಆದ ಡಾ. ರೇಖಾ ಪಾಟೀಲ ಅವರು ಮಾತನಾಡಿ, ರಾಮನ ಹೆಸರೆ ಒಂದು ದಿವ್ಯ ಔಷzs.À ಪಾಪ ಪರಿಹಾರಕ ಮಂತ್ರ, ರಾಮಾಯಣವು ಶ್ರೇಷ್ಠ ಹಾಗೂ ಸಂಸ್ಕøತಿಯ ಪ್ರತೀಕ. ಅದು ಧರ್ಮದ ಮೇಲೆ ನಿಂತಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಡಾ. ದತ್ತಾತ್ರೇಯ ಮಳಖೇಡ ಅವರು ಮಾತನಾಡಿ, ರಾಮಾಯಣದ ವಿವಿಧ ಪ್ರಸಂಗಗಳನ್ನು ನೆನಪಿಸುತ್ತಾ, ಜೈನ್ ರಾಮಾಯಣ, ಬೌದ್ಧ ರಾಮಾಯಣ, ವೈಷ್ಣವ ರಾಮಾಯಣ, ಕುವೆಂಪು ರಾಮಾಯಣಗಳಿವೆ. ನಾಗಚಂದ್ರ ಬರೆದ ರಾಮಚಂದ್ರ ಚರಿತೆಯು ಕನ್ನಡ ಸಾಹಿತ್ಯದ ಮೇರು ಕೃತಿಯಾಗಿದೆ ಎಂದರು. ರಾಮಾಯಣದಲ್ಲಿ ಸೀತೆಯ ವನವಾಸ ಕುರಿತು ಉಪನ್ಯಾಸ ನೀಡಿದ ಸಂತೋಷ ಕುಲಕರ್ಣಿ ಅವರು, ಪೂರ್ವದಲ್ಲಿ ಹಿಂಸಾತ್ಮಕ ದಾರಿಹಿಡಿದಿದ್ದ ವಾಲ್ಮೀಕಿಗಳು ಭಾರಧ್ವಜ ಋಷಿಗಳು ಮತ್ತು ನಾರದ ಮುನಿಗಳಿಂದ ಜ್ಞಾನ ಪ್ರಾಪ್ತಿಮಾಡಿಕೊಂಡು ರಾಮಾಯಣದಂತಹ ಶ್ರೇಷ್ಠ ಕೃತಿ ರಚಿಸಿದರು. ರಾಮಾಯಣ ಅತಿ ಹೆಚ್ಚು ವಿಮರ್ಶೆಗೆ ಒಳಗಾದ ಕೃತಿ. ಪೂರ್ವ ಜನ್ಮದಲ್ಲಿ ನಡೆದ ಘಟನೆಗಳೆ ರಾಮಾಯಣಕ್ಕೆ ಕಾರಣ. ಸೀತಾ ಮಾತೆಯೂ ಅಗ್ನಿಯಷ್ಟೇ ಪವಿತ್ರಳು ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಪಿ.ಬಿ. ಬಿರಾದಾರ ಅವರು, ರಾಮ ಜನ್ಮ ಮತ್ತು ವನವಾಸ ಕುರಿತು ಮಾತನಾಡುತ್ತ ಭಾರತವನ್ನು ಅರಿಯಬೇಕಾದರೆ ರಾಮಾಯಣ ಓದಬೇಕು. ರಾಮ ಎಂಬ ಹೆಸರೆ ಪಾಪ ತೊಳೆದು ಅಮೃತತ್ವಕ್ಕೆ ಒಯ್ಯುವ ಮಂತ್ರ. ಆದರ್ಶವೇ ರಾಮಾಯಣದ ಉಸಿರು ಎಂದರು.
ಕಾರ್ಯಕ್ರಮದಲ್ಲಿ ಅಂಬಿಕಾ ಪಾಟೀಲ, ಸುನಂದ ಸೊನ್ನಹಳ್ಳಿ, ಐ.ಟಿ. ಪಡಗಣ್ಣವರ, ಅರ್ಜುನ ಹಂಜಗಿ, ಡಾ. ಸಂಗಮೇಶ ಮೇತ್ರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ ಇದ್ದರು.
ನಮನ ಮಹ್ಮದಗೌಸ ಸ್ವಾಗತಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು, ಶಿಲ್ಪಾ ಭಿಷ್ಮೆ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅಭಿಷೇಕ ಚಕ್ರವರ್ತಿ, ಕಮಲಾ ಮುರಾಳ, ರಾಜಾಸಾಬ ಶಿವನಗುತ್ತಿ, ವಿಜಯಲಕ್ಷ್ಮಿ ಹಳಕಟ್ಟಿ, ಸುಖದೇವಿ ಅಲಬಾಳಮಠ, ಎಸ್.ಎಸ್. ಬಡಿಗೇರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಶ್ರೀಕಾಂತ ಮಾದರ, ಅರ್ಜುನ ಶಿರೂರ, ಬಿ.ಎಸ್. ಬಳೂರ, ರಮಾನಾಥ ನಾಯಕ ಮುಂತಾದವರು ಇದ್ದರು