ರಾಮಾಯಣ ಎಕ್ಸ್‌ಪ್ರೆಸ್ ಪರಿಚಾರಕರ ಸಮವಸ್ತ್ರ ಬದಲು

ನವದೆಹಲಿ,ನ.೨೩- ದೇಶದಲ್ಲಿ ಹೊಸದಾಗಿ ಸಂಬಂಧಿಸುವ ರಾಮಾಯಣ ಎಕ್ಸ್‌ಪ್ರೆಸ್ ರೈಲಿನ ಪರಿಚಾರಕ ಸಿಬ್ಬಂದಿಗೆ ಕೇಸರಿ ಬಣ್ಣದ ಯೂನಿಫಾರಂಗೆ ಸಾಧು ಸಂತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ಯೂನಿಫಾರಂ ಹಿಂದಕ್ಕೆ ಪಡೆದಿದೆ.
ಕೇಸರಿ ಬಣ್ಣದ ಯೂನಿಫಾರ್ಮ್ ಬದಲಿಸಿ ಪ್ಯಾಂಟ್ , ಶರ್ಟ್ ಮತ್ತು ಹೆಡ್ ಕವರ್ ಇರುವ ಸಮವಸ್ತ್ರವನ್ನ ರೈಲ್ವೆ ಸಚಿವಾಲಯ ಹೊಸದಾಗಿ ಪರಿಚಯ ಮಾಡಿದೆ.
ರೈಲು ಸಿಬ್ಬಂದಿಗೆ ನೀಡಿರುವ ಕೇಸರಿ ಬಣ್ಣದ ಸಮವಸ್ತ್ರ ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ. ಈ ಸಮವಸ್ರ್ತ ಬದಲು ಮಾಡದಿದ್ದರೆ ರೈಲು ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ಉಜ್ಜಯಿನಿಯ ಸಂತರು ಬೆದರಿಕೆ ಹಾಕಿದ್ದರು. ಇದಕ್ಕೆ ಮಣಿದಿರುವ ರೈಲ್ವೆ ಸಚಿವಾಲಯ ಯೂನಿಫಾರಂ ಹಿಂದಕ್ಕೆ ಪಡೆದಿದೆ.
ಉಜ್ಜಯಿನಿಯ ಅಖಾಡ ಪರಿಷತ್ತಿನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶಪುರಿ ಅವರು, ರೈಲು ಸಿಬ್ಬಂದಿಗೆ ಪೇಟ ಮತ್ತು ರುದ್ರಾಕ್ಷಿ ಮಾಲೆ ಗಳನ್ನು ಒಳಗೊಂಡಿರುವ ಸಮವಸ್ತ್ರಕ್ಕೆ ಅಸಮ್ಮತಿ ವ್ಯಕ್ತಪಡಿಸಿ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು.
ರಾಮಾಯಣ ಎಕ್ಸ್ ಪ್ರೆಸ್ ರೈಲಿನ ಸಹಾಯಕ ಸಿಬ್ಬಂದಿಗೆ ನೀಡಿರುವ ವಸ್ತ್ರ ಸಂಹಿತೆ ಹಿಂದಕ್ಕೆ ಪಡೆಯದಿದ್ದರೆ ಡಿಸೆಂಬರ್ ೧೨ ರಂದು ದೆಹಲಿಯಲ್ಲಿ ರೈಲು ನಿಲ್ಲಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದರು.
ಕೇಂದ್ರ ರೈಲ್ವೆ ಸಚಿವಾಲಯ ಅಯೋಧ್ಯೆ, ನಂದಿಗ್ರಾಮ, ಜನಕ್ ಪುರ, ಚಿತ್ರಕೂಟ, ಸೀತಾಮರ್ಹಿ, ನಾಸಿಕ್, ಹಂಪಿ ಮತ್ತು ರಾಮೇಶ್ವರ ಸೇರಿದಂತೆ ಮುಂತಾದ ಸ್ಥಳಗಳಿಗೆ ಯಾತ್ರಿಕನ ಕೊಂಡೊಯ್ಯುತ್ತಿದೆ ಪ್ರಥಮ ದರ್ಜೆ ರೆಸ್ಟೋರೆಂಟ್ ಗ್ರಂಥಾಲಯಗಳನ್ನು ಕೂಡ ಹೊಂದಿದೆ.

ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಊಟ-ಉಪಚಾರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೋಡಿಕೊಳ್ಳಲು ಪರಿಚಾರಕರನ್ನು ನೇಮಿಸಲಾಗಿದೆ.