ರಾಮಾಯಣದ ಮೌಲ್ಯಗಳನ್ನು ಅಳವಡಿಸಿಕೊಳ್ಳಿ

ಕೆ.ಜಿ.ಎಫ್.ನ೨:ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಬರೆದಿರುವ ಮೌಲ್ಯಗಳನ್ನ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಡಿವೈಎಸ್‌ಪಿ ಬಿ.ಕೆ. ಉಮೇಶ್ ಕರೆ ನೀಡಿದರು.
ಕೋಲಾರ ಚಿನ್ನದ ಗಣಿ ಪ್ರದೇಶದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮzಲ್ಲಿ ಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕೆ ಪುಷ್ಪಾಗಳನ್ನು ಅರ್ಪಿಸಿದ ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,ಭಾರತೀಯ ಸಂಸ್ಕೃತಿಯನ್ನ ಇಂದಿಗೂ ಉಳಿಸಿ ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನ ಸಾರಿದ ಮಹಾನ್‌ಚೇತನ ವಾಲ್ಮೀಕಿ ಮಹರ್ಷಿಗಳು. ಅದೇ ರೀತಿ ಸರ್ಕಾರವು ಮಹರ್ಷಿ ವಾಲ್ಮೀಕಿಯ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಪುಸ್ತಕಗಳ ಮೂಲಕ ತಲುಪಿಸುವ ಕೆಲಸ ಮಾಡಿ, ಮಹರ್ಷಿ ವಾಲ್ಮೀಕಿ ವಿಶ್ವಮಾನವ ಎಂಬುದನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸ ಮಾಡಬೇಕೆಂದರು.
ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಶಾಖಾಧೀಕ್ಷಕಿ ಎ.ನಾಜೀಮಾಬಾನು, ನಿಸ್ತಂತು ನಿರೀಕ್ಷಕ ಚಂದ್ರಶೇಖರ್, ಪಿ.ಎಸ್.ಐ. ಎನ್.ಜಿ.ಚೌಡಪ್ಪ, ನಾಗಪ್ಪ ಮಲ್ಲಪ್ಪ ಖಾನಾಪೂರ, ಪ್ರಭಾರ ಆರ್.ಪಿ.ಐ. ಟಿ.ಎ.ಸೋಮರಾಜು ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕೆಜಿಎಫ್ ಪೊಲೀಸ್ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ, ವೃತ್ತ ಕಛೇರಿಗಳಲ್ಲಿ ಹಾಗೂ ಡಿ.ಎ.ಆರ್.ನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಮಾಡಲಾಯಿತು.