ರಾಮಾಯಣದ ಮೂಲಕ ರಾಜಪ್ರಭುತ್ವ ತಿಳಿಸಿದ ವಾಲ್ಮೀಕಿ

ಹುಳಿಯಾರು, ನ. ೧೨- ಭಾರತದ ಪ್ರಾಚೀನ ಬುಡಕಟ್ಟುಗಳಲ್ಲಿದ್ದ ಅಂದಿನ ರಾಜಪ್ರಭುತ್ವವನ್ನು ರಾಮಾಯಣದ ಮೂಲಕ ತಿಳಿಸಿದ ಸಂತ ವಾಲ್ಮೀಕಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಅಭಿಪ್ರಾಯಪಟ್ಟರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆಯಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಮ, ರಾವಣ ಇಲ್ಲವೇ ಸೀತೆ ಇವರನ್ನು ಆದರ್ಶವಾಗಿ ಇಟ್ಟುಕೊಂಡು ಇಡೀ ಸಾಮಾಜಿಕ ಮತ್ತು ಹೋರಾಟದ ವಿಷಯವನ್ನು ಕಿಂಚಿತ್ತೂ ಮೌಲ್ಯಗಳಿಗೆ ಧಕ್ಕೆಯಾಗದಂತೆ ಚಿತ್ರಿಸಿದ್ದಾರೆ. ಈ ಕಾವ್ಯವನ್ನು ಸಾವಿರಾರು ಕವಿಗಳು ಅವರವರ ಭಾವಕ್ಕೆ, ಭಕುತಿಗೆ ತಕ್ಕಂತೆ ಕಂಡಿದ್ದಾರೆ ಎಂದರು.
ಅತಿ ಹಿಂದುಳಿದ ವಾಲ್ಮೀಕಿ ಸಮಾಜವು ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಅತ್ಯವಶ್ಯಕವಾಗಿದ್ದು, ಮನೆಯ ಆರ್ಥಿಕ ಸಮಸ್ಯೆಗಳನ್ನು ಬದಿಗೊತ್ತಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ೦ಗದಹಳ್ಳಿ ರಾಜ್‌ಕುಮಾರ್, ಪೊಲೀಸ್ ಇಲಾಖೆಯ ನಾಗರಾಜ್, ರವಿಕುಮಾರ್, ಲಕ್ಷ್ಮಿನರಸಿಂಹಸ್ವಾಮಿ, ಕರಿಯಪ್ಪ, ತುಂಬಿನಕೆರೆ ಬಸವರಾಜು ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮಂಜುನಾಥ್, ಹೋಬಳಿ ಅಧ್ಯಕ್ಷರಾದ ಮೋಹನ್‌ಕುಮಾರ್, ಶ್ರೀನಿವಾಸ್, ಮಾದಾಪುರ ರಂಗನಾಥ್, ಪರಮೇಶ್, ಕ್ಯಾತನಾಯಕನಹಳ್ಳಿ ಮಂಜುನಾಥ್, ಹುಳಿಯಾರು ದುರ್ಗರಾಜ್, ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.