ರಾಮಾಯಣದಂತಹ ಮಹಾಗ್ರಂಥ ರಚಿಸಿ ಜಗತ್ಪ್ರಸಿದ್ಧಿಯಾದ ವಾಲ್ಮೀಕಿ -ಎನ್. ಕೃಷ್ಣ.

ಕೂಡ್ಲಿಗಿ.ನ .1:-ರಾಮಾಯಣವೆಂಬ ಮಹಾಗ್ರಂಥ ರಚಿಸುವ ಮೂಲಕ ಆದಿಕವಿ ಮಹರ್ಷಿ ಶ್ರೀವಾಲ್ಮೀಕಿ ಜಗತ್ಪ್ರಸಿದ್ಧಿಯಾಗಿದ್ದರೆ ಎಂದು ಗುಡೇಕೋಟೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್. ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಗುಡೇಕೋಟೆ ಗ್ರಾಮದ ಶ್ರೀ ವಾಲ್ಮೀಕಿ ಭವನದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡುತ್ತ ಈ ಬಾರಿ ಜಗತ್ತನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ಸಾಂಕ್ರಾಮಿಕ ಕಾಯಿಲೆಯಿಂದ ವಾಲ್ಮೀಕಿ ಜಯಂತಿ ಸೇರಿದಂತೆ ವಿವಿಧ ದಾರ್ಶನಿಕರ, ರಾಷ್ಟನಾಯಕರ, ಜನರ ಹಬ್ಬ ಹರಿದಿನಗಳು ಸರ್ಕಾರದ ಸುತ್ತೋಲೆಯಲ್ಲೇ ಅತ್ಯಂತ ಸರಳವಾಗಿ ಆರೋಗ್ಯದ ಹಿತದೃಷ್ಟಿಯಲ್ಲಿ ಆಚರಿಸಲಾಗುತ್ತಿದೆ. ಅನೇಕ ಶತ ಶತಮಾನಗಳಿಂದ ಇಂದಿಗೂ ಭಾರತದ ಕೋಟ್ಯಂತರ ಜನಗಳ ಜೀವನದ ಬೆಳಕಾಗಿರುವುದು ರಾಮಾಯಣವೇ ಎಂದು ಹೇಳಬಹುದು.ವಾಲ್ಮೀಕಿ ಇಲ್ಲದೆ ರಾಮಾಯಣವಿಲ್ಲ, ರಾಮಾಯಣವಿಲ್ಲದೆ ವಾಲ್ಮೀಕಿ ಇಲ್ಲಾ ಎಂಬುದಾಗಿದೆ .ಭೂಮಿಯ ಮೇಲೆ ಬೆಟ್ಟ ಗುಡ್ಡಗಳು ನದಿ, ಸರೋವರಗಳು ರಾಮಾಯಣದಲ್ಲಿ ಬರುವ ಸನ್ನಿವೇಶಗಳನ್ನು ಬಿಂಬಿಸುತ್ತವೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಸೊಸೈಟಿ ಬಸವರಾಜ, ವೆಂಕಟೇಶ, ಕೊಟ್ರೇಶ, ಪೇಂಟ್ ಕೃಷ್ಣ, ರಾಮಾಂಜಿನಿ, ತಿಪ್ಪೇಸ್ವಾಮಿ ಹಾಗೂ ಇತರರು ಜಯಂತಿ ಆಚರಣೆಯಲ್ಲಿ ಬಾಗವಹಿಸಿದ್ದರು.