ರಾಮಸೇನೆ : ಆಹಾರ, ಹಣ್ಣು ವಿತರಣೆ

ರಾಯಚೂರು.ಮೇ.೩೦- ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಮಸೇನೆ ವತಿಯಿಂದ ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತು ಅವರ ಸಹಾಯಕರಿಗೆ ಆಹಾರ ಮತ್ತು ಹಣ್ಣು ವಿತರಿಸಲಾಯಿತು.
ಲಾಕ್ ಡೌನ್ ಕಾರಣದಿಂದ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಮತ್ತು ಇತರರಿಗೆ ಆಹಾರ ಪದಾರ್ಥ ದೊರೆಯದೇ ಸಂಕಷ್ಟಕ್ಕೆ ಗುರಿಯಾಗುತ್ತಿರುವುದನ್ನು ಮನಗಂಡು ರಾಮಸೇನೆ ಈ ಕಾರ್ಯವನ್ನು ಹಮ್ಮಿಕೊಂಡಿದೆ. ಪ್ರತಿನಿತ್ಯ ನೂರಾರು ಜನರಿಗೆ ಆಹಾರ ಮತ್ತು ಹಣ್ಣು ಹಾಗೂ ನೀರಿನ ಪ್ಯಾಕೇಟ್ ವಿತರಿಸಿ, ಮಾನವೀಯತೆ ಮೆರೆದಿದೆ. ರಾಮಸೇನೆ ಅಧ್ಯಕ್ಷ ಉಮೇಶ ಬಾಬು ಹಾಗೂ ದೊಡ್ಡ ನರಸಿಂಗಪ್ಪ, ಕೆ.ಟಿ.ಆನಂದ, ಈರಣ್ಣ, ಹನುಮಂತು ಮೇಸ್ತ್ರಿ ಸೇರಿದಂತೆ ಅನೇಕರು ಈ ಕಾರ್ಯದಲ್ಲಿ ತೊಡಗಿದ್ದರು.