ರಾಮಸಮುದ್ರ ಚಿಕ್ಕ ಬೀದಿಯಲ್ಲಿ ವಿ.ಶ್ರೀನಿವಾಸಪ್ರಸಾದ್‍ಗೆ ಶ್ರದ್ದಾಂಜಲಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.30- ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸಪ್ರಸಾದ್ ನಿಧನದ ಗೌರವಾರ್ಥ ನಗರದ ಸಮೀಪದ ರಾಮಸಮುದ್ರ ಚಿಕ್ಕ ಬೀದಿಯ ಡಾ. ಬಿ.ಆರ್. ಅಂಬೇಡ್ಕರ್ ಸಂಘ ಹಾಗೂ ಗ್ರಾಮಸ್ಥರು ಶ್ರದ್ದಾಂಜಲಿ ಸಲ್ಲಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗ ಶಾಮಿಯಾನ ಹಾಕಿ ವಿ. ಶ್ರೀನಿವಾಸಪ್ರಸಾದ್ ಅವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದರು. ಸಂಘದ ಅಧ್ಯಕ್ಷರು, ಯಜಮಾನರು ಹಾಗು ಮುಖಂಡರು ಅಗಲಿದ ನಾಯಕನಿಗೆ ಪುಷ್ಪ ನಮನ ಸಲ್ಲಿಸಿ, ಅತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಅಚರಿಸಿದರು. ಮುಂಬತ್ತಿಯನ್ನು ಹಚ್ಚಿ ಸಂತಾಪ ಸೂಚಿಸಿದರು.
ನಗರಸಭಾ ಮಾಜಿ ಸದಸ್ಯ ಬಸವರಾಜು ಮಾತನಾಡಿ, ನಮ್ಮೆಲ್ಲರ ನೆಚ್ಚಿನ ನಾಯಕರು ದಲಿತರ ಕಣ್ಮಣಿ ವಿ. ಶ್ರೀನಿವಾಸಪ್ರಸಾದ್ ಅವರು ನಮ್ಮನ್ನು ಬಿಟ್ಟು ಆಗಲಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಅದ ಛಾಪು ಮೂಡಿಸಿದ್ದ ಸ್ವಾಭಿಮಾನಿ ಚಕ್ರವರ್ತಿ ಎಂದು ಬಿರುದು ಪಡೆದುಕೊಂಡಿದ್ದರು. ದೀನ ದಲಿತರು, ಬಡವರÀು ಹಾಗೂ ಎಲ್ಲಾ ವರ್ಗದ ಅಭಿವೃದ್ದಿಗೆ ಶ್ರಮಿಸಿದ್ದ ಧೀಮಂತ ನಾಯಕರು. ಸದಾ ದಲಿತರ ಶ್ರೇಯೋಭಿವೃದ್ದಿಗೆ ಚಿಂತನೆ ಮಾಡುತ್ತಾ ಅವರಿಗೆ ಸಲವತ್ತುಗಳನ್ನು ಕಲ್ಪಿಸುವ ಜೊತೆಗೆ ಎಲ್ಲೇ ಸಮಾಜಕ್ಕೆ ಅನ್ಯಾಯವಾದರು ಗಟ್ಟಿ ಧ್ವನಿಯಲ್ಲಿ ಖಂಡಿಸುತ್ತಿದ್ದರು.ಇಂಥ ಮೇರು ವ್ಯಕ್ತಿತ್ವದ ನಾಯಕನ ಆಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಆ ಕುಟುಂಬಕ್ಕೆ ಭಗÀವಂತ ನೀಡಲಿ ಎಂದು ಪ್ರಾರ್ಥಿಸಿಕೊಂಡರು.
ವಕೀಲ ನಾಗಣ್ಣ ಮಾತನಾಡಿ, 1974 ರಿಂದ ಇಲ್ಲಿಯ ತನಕ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆರು ಬಾರಿ ಸಂಸದರಾಗಿದ್ದ ವಿ. ಶ್ರೀನಿವಾಸ್ ಪ್ರಸಾದ್ ಅವರು ದಲಿತರ ಸೂರ್ಯ, ಅವರ ನಿಧನದಿಂದ ಸಮಾಜಕ್ಕೆ ತುಂಬಲಾದ ನಷ್ಟವಾಗಿದೆ. ಅವರ ತತ್ವ ಅದರ್ಶಗಳನ್ನು ಮೈಗೂಡಿಸಿಕೊಂಡು, ಎಲ್ಲರು ಸಹ ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆಯೋಣ ಎಂದರು.
ಸಭೆಯಲ್ಲಿ ಯಜಮಾನರಾದ ಬಂಗಾರಸ್ವಾಮಿ, ಮಾಜಿ ಯಜಮಾನ ಮಹದೇವಸ್ವಾಮಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ನಾಗಣ್ಣ, ಉಪಾಧ್ಯಕ್ಷ ಜಯಕುಮಾರ್, ಯುತ್ ಮೆಂಬರ್ ಲೋಕೇಶ್, ಆಶೋಕ್, ಗೋವಿಂದರಾಜು, ಜನಶಕ್ತಿ ಸುರೇಶ್ ಹಾಗೂ ಮುಖಂಡರು, ಯುವಕರು ಸಂಘದ ಪದಾಧಿಕಾರಿಗಳು ಇದ್ದರು.