
ಬೀದರ್: ಮಾ.13:ನಾನು ಒಮ್ಮೆ ಮುಂದಿಟ್ಟ ಹೆಜ್ಜೆ ಹಿಂದೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಶಾಶ್ವತವಾಗಿ ತನ್ನ ಶಕ್ತಿಯನ್ನು ಕರ್ನಾಟಕ ಮಾತ್ರವಲ್ಲ ದೇಶಕ್ಕೆ ತೋರಿಸಿಕೊಡಲಿದೆ ಎಂದು ಪಕ್ಷದ ಸಂಸ್ಥಾಪಕರೂ ಆದ ಮಾಜಿ ಸಚಿವ ಜನಾರ್ದನ ರೆಡ್ಟಿ ಹೇಳಿದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೀದರ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊಸ ಪ್ರದೇಶಿಕ ಪಕ್ಷಕ್ಕೆ ಜಾತಿ- ಮತ ಮೀರಿ ಬೆಂಬಲ ವ್ಯಕ್ತವಾಗುತ್ತುದೆ. ಇಟ್ಟ ಹೆಜ್ಜೆಯನ್ನ ಹಿಂದಿಡುವವನು ವೀರನೂ ಅಲ್ಲ, ಧೀರನೂ ಅಲ್ಲ ಎಂದು ತಿಳಿಸಿದರು.
ಆತ್ಮೀಯ ಗೆಳೆಯ ಶ್ರೀರಾಮಲು ಅವರೊಂದಿಗೆ ಸ್ನೇಹ ಸಂಬಂಧ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಗೌರವ ಕೊನೆಯವರೆಗೆ ಶಾಶ್ವತವಗಿ ಇರಲಿದೆ. ಅವರಿಬ್ಬರನ್ಮು ನನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಎಂದು ಹೇಳಿದರು.