ರಾಮಲಿಂಗ ದೇವಾಲಯ ಚಾಲುಕ್ಯ ಶಿಲ್ಪಕಲೆಯ ಆಗರ

ಬಾದಾಮಿ(ಕುಲಕರ್ಣಿ ಬಿಂದುಮಾಧವ ಪ್ರಧಾನ ವೇದಿಕೆ), ಮಾ27: 11 ನೇ ಶತಮಾನದಲ್ಲಿ ನಿರ್ಮಿಸಿದ್ದು ಎಂದು ಹೇಳಲಾಗುವ ಶಿಲಾಶಾಸನ ಹೊಂದಿರುವ ರಾಮಲಿಂಗ ದೇವಾಲಯ ಒಳಗೊಂಡಂತೆ ಚಾಲುಕ್ಯ ಶಿಲ್ಪಕಲೆಯ ಆಗರ ಎನ್ನಬಹುದು ಎಂದು ಸರ್ವಾಧ್ಯಕ್ಷ ಡಾ.ಕರವೀರಪ್ರಭು ಕ್ಯಾಲಕೊಂಡ ಹೇಳಿದರು.
ಅವರು ಶುಕ್ರವಾರ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೀಲಗುಂದ ಗ್ರಾಮದ ಓಣಿ ಓಣಿಗಳಲ್ಲಿ ವೀರಗಲ್ಲುಗಳು, ಶಿಲಾಮೂರ್ತಿಗಳು ಕಾಣಸಿಗುತ್ತವೆ. ಅಲ್ಲಿ ರಾಜಲಕ್ಷ್ಮೀ ವಿಗ್ರಹ, ವೀರಗಲ್ಲುಗಳು ಸಿಗುತ್ತವೆ. ಈ ದೇವಾಲಯ ಕಲ್ಯಾಣ ಚಾಲುಕ್ಯರ ಕಾಲದ್ದು, ದೇಸಾಯರ ಕಾಲದ ಹುಡೆ, ನಂದಿ, ನವಗ್ರಹ ಶಿಲ್ಪ, ಕಾಳಿಕಾದೇವಿಯ ದೇವಾಲಯ ಇಲ್ಲಿವೆ. ಈ ದೇವಾಲಯದಲ್ಲಿ ಕುದುರೆ ಮೇಲೆ ಕುಳಿತ ಕಾಳಿಕಾಮಾತೆ ವಿಗ್ರಹ, ಸೂಂiÀರ್iನಾರಾಯಣ, ನಾಗದೇವತೆ, ಈಶ್ವರಲಿಂಗ ನೋಡಲು ಸಿಗುತ್ತವೆ. ಸಂಗಮೇಶ್ವರ ದೇವಾಲಯದಲ್ಲಿ ಈಶ್ವರಲಿಂಗ, ಗಣಪತಿ ವಿಗ್ರಹಗಳು ಮನನೋಹಕವಾಗಿವೆ. ಇನ್ನೊಂದು ಈಶ್ವರಲಿಂಗ ದೇವಾಲಯದಲ್ಲಿ ಈಶ್ವರಲಿಂಗ ಇರದಿದ್ದರೂ, ರಾಮ, ಸೀತೆಯರ ಎರಡು ವಿಗ್ರಹಗಳಿವೆ. ದೇವಾಲಯದ ಸುತ್ತ ನಾಗದೇವತೆ, ರಾಮನ ಶಿಲ್ಪಗಳು ಕಂಡುಬರುತ್ತವೆ. ನಿಸರ್ಗದ ಮಡಿಲಲ್ಲಿ ಇರುವ ಇನ್ನೊಂದು ಈಶ್ವರಲಿಂಗ ದೇವಾಲಯದ ಸುತ್ತಮುತ್ತ ಹೊಂಡ, ಈಶ್ವರಶಿಲ್ಪ, ನಂದಿ, ಗಣೇಶ, ವೀರಭದ್ರನ ಶಿಲ್ಪ ಸಿಗುತ್ತವೆ. ಚಾಲುಕ್ಯರ ಕುರುಹುಗಳು ಇಷ್ಟಕ್ಕೆ ಮುಗಿದಿದೆ ಎನಿಸದೇ, ಇನ್ನೂ ಹುಡುಕಿದರೆ ಸಿಗಬಹುದು ಎಂಬ ನಿರೀಕ್ಷೆ, ಆತ್ಮವಿಶ್ವಾಸ ಸಂಶೋಧಕರಲ್ಲಿ ಎಂದೂ ಬತ್ತದ ರಾಮತೀರ್ಥ, ತೀರ್ಥ ಬಸವಣ್ಣ ಪ್ರಸಿದ್ಧ ಪುಣ್ಯಕ್ಷೇತ್ರಗಳು ಎಂದು ಹೇಳಿದರು. ನಿವೃತ್ತ ಕೃಷಿ ಅಧಿಕಾರಿ ಎನ್.ಡಿ.ದೊಡ್ಡನಿಂಗಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.