ರಾಮಲಿಂಗ ಕಾಮಣ್ಣನ ದರ್ಶನ ಆರಂಭ


ನವಲಗುಂದ,ಮಾ.21: ಇಷ್ಟಾರ್ಥ ಸಿದ್ಧಿ ಪ್ರದಾಯಕನೆಂದು ಖ್ಯಾತಿ ಪಡೆದ ಇಲ್ಲಿಯ ಶ್ರೀರಾಮಲಿಂಗ ಕಾಮಣ್ಣನ ದೇವರ ದರ್ಶನಕ್ಕೆ ಭಕ್ತ ಸಮೂಹ ಸಾಗರೋಪಾದಿಯಲ್ಲಿ ಹರಿದು ಬರುತ್ತಿದೆ. ಗುರುವಾರವಾದ ಇಂದು ಬೆಳಿಗ್ಗೆಯಿಂದಲೇ ದರ್ಶನ ಆರಂಭವಾಗಿದ್ದು ಭಕ್ತರು ಸರದಿಯಲ್ಲಿ ದರ್ಶನಕ್ಕಾಗಿ ಕಾದಿರುವ ದಶ್ಯ ಸಾಮಾನ್ಯವಾಗಿತ್ತು.
ಬೆಳಿಗ್ಗೆ 8 ಗಂಟೆ ಸುಮಾರಿಗೆ ರಾಮಲಿಂಗ ಓಣಿಯ ಕಾಮಣ್ಣನ ಗುಡಿಯಿಂದ ಸ್ಥಳೀಯ ದ್ಯಾಮವ್ವನ ದೇವಾಲಯದ ವರೆಗೂ ಭಕ್ತರ ಸರದಿ ಕಂಡು ಬಂದಿತು.