ರಾಮಲಲ್ಲಾ ಮೂರ್ತಿಗೆ ಸೂರ್ಯ ತಿಲಕ ಸ್ಪರ್ಶ

ಆಯೋಧ್ಯೆ.ಏ.೧೭-ರಾಮ ನವಮಿಯ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿರುವ ರಾಮಲಲ್ಲಾ ಮೂರ್ತಿಯ ಸೂರ್ಯ ತಿಲಕ ಗೋಚರಿಸುವ ಮೂಲಕ ದೈವಿಕ ಕ್ಷಣಕ್ಕೆ ಸಾಕ್ಷಿಯಾಯಿತು.ಸೂರ್ಯ ತಿಲಕ ಬೆಳಗ್ಗೆ ೧೧.೫೮ ರಿಂದ ಮಧ್ಯಾಹ್ನ ೧೨.೦೩ರ ತನಕ ರಾಮಲಲ್ಲಾನ ವಿಗ್ರಹದ ಮೇಲೆ ಸೂರ್ಯ ರಶ್ನಿ ತಿಲಕ ಇಡುತ್ತಿದ್ದಂತೆ ಪೂಜೆ ಪುನಸ್ಕಾರ ಭಕ್ತರ ಕರತಾಡನ ಮುಗಿಲು ಮುಟ್ಟಿತ್ತು.ರಾಮಲಲ್ಲಾನ ಮೂರ್ತಿ ಮೇಲೆ ಸೂರ್ಯ ತಿಲಕ ಸ್ಪರ್ಶ ಮಾಡಿದೆ. ರಾಮ ಮಂದಿರದಲ್ಲಿ ರಾಮನವಮಿಯ ಸಂದರ್ಭದಲ್ಲಿ ಸೂರ್ಯ ತಿಲಕ ಎಂದು ಕರೆಯಲ್ಪಡುವ ರಾಮಲಲ್ಲಾನ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳು ಗೋಚರಿಸಿ ದೈವಿಕ ಘಟನೆಗೆ ಸಾಕ್ಷಿಯಾಗಿದೆ.
ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಮಮಂದಿರದಲ್ಲಿ ಅಂಖ್ಯಾತ ಭಕ್ತರು ಭಾಗಿಯಾಗಿ ರಾಮಲಲ್ಲನ ಮೂರ್ತಿಯ ಮೇಲೆ ಸೂರ್ಯ ತಿಲಕ ಸ್ಪರ್ಶಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ ಮೊಳಗಿದವು. ನೆರದಿದ್ದ ಭಕ್ತರಲ್ಲಿ ಪುಳಕದ ಭಾವನೆ ಮನೆ ಮಾಡಿತ್ತು. ಅಪರೂಪದ ಕ್ಷಣ ಕಣ್ತುಂಬಿಕೊಳ್ಳಲು ಭಕ್ತರಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡಲಾಗಿತ್ತು.
ಈ ವರ್ಷದ ಜನವರಿ ೨೨ ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಹೊಸ ದೇವಾಲಯದಲ್ಲಿ ರಾಮ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಇದು ಮೊದಲ ರಾಮನವಮಿಯಾಗಿದೆ. ಈ ವ್ಯವಸ್ಥೆಯನ್ನು ವಿಜ್ಞಾನಿಗಳು ಪರೀಕ್ಷಿಸಿದ್ದಾರೆ.
ಪ್ರತಿ ಶ್ರೀರಾಮ ನವಮಿಯ ದಿನದಂದು ಶ್ರೀರಾಮನ ಮೂರ್ತಿಯ ಹಣೆಯ ಮೇಲೆ ’ತಿಲಕ’ವನ್ನು ಕೇಂದ್ರೀಕರಿಸುವುದು ಸೂರ್ಯ ತಿಲಕ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಯೋಜನೆಯೊಂದಿಗೆ ಸಂಬಂಧ ಹೊಂದಿದ್ದ ಸಿಎಸ್‌ಐಆರ್-ಸಿಬಿಆರೈ ರೂರ್ಕಿಯ ವಿಜ್ಞಾನಿ ಡಾ.ಎಸ್.ಕೆ.ಪಾಣಿಗ್ರಾಹಿ ಹೇಳಿದ್ದಾರೆ.
ಪ್ರತಿ ವರ್ಷ ರಾಮ ನವಮಿಯ ದಿನದಂದು ಸೂರ್ಯನ ಸ್ಥಾನವು ಬದಲಾಗುತ್ತದೆ. ವಿವರವಾದ ಲೆಕ್ಕಾಚಾರಗಳು ರಾಮ ನವಮಿಯ ದಿನಾಂಕವು ಪ್ರತಿ ೧೯ ವರ್ಷಗಳಿಗೊಮ್ಮೆ ಪುನರಾವರ್ತನೆಯಾಗುತ್ತದೆ ಎಂದು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಮಾತನಾಡಿ “ಸೂರ್ಯ ತಿಲಕದ ಸಮಯದಲ್ಲಿ, ಭಕ್ತರನ್ನು ರಾಮ ಮಂದಿರದೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿತ್ತು ದೇವಾಲಯದ ಟ್ರಸ್ಟ್‌ನಿಂದ ಸುಮಾರು ೧೦೦ ಎಲ್‌ಇಡಿಗಳನ್ನು ಹಾಕಲಾಗುತ್ತು ಮತ್ತು ಸರ್ಕಾರದಿಂದ ೫೦ ಎಲ್‌ಇಡಿಗಳನ್ನು ಹಾಕಲಾಗಿದ್ದು ಅಪರೂಪದ ಕ್ಷಣವನ್ನು ಜನರಿಗೆ ತೋರಿಸಲು ಎಲ್ಲಾ ವ್ಯವಸ್ಥೆಯನ್ನು ಮುಂದೆಯೇ ಮಾಡಲಾಗಿತ್ತು ಎಂದಿದ್ದಾರೆ.