ರಾಮಲಲ್ಲಾ ಪ್ರತಿಷ್ಠಾಪನೆ; ನೇಪಾಳ ಪುರೋಹಿತರಿಂದ ಮಹಾಯಾಗ

ಅಯೋಧ್ಯೆ,ಜ.೧೧-ಉತ್ತರಪ್ರದೇಶದ ಆಯೋಧ್ಯೆಯಲ್ಲಿ ಶ್ರೀರಾಮನಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಬಾಕಿ ಇದ್ದು ರಾಮಮಂದಿರದ ಪ್ರತಿಷ್ಠಾಪನೆಗೆ ನೇಪಾಳದಿಂದ ೨೧ಕ್ಕೂ ಅಧಿಕ ಪುರೋಹಿತರು ಮಹಾಯಾಗ ನಡೆಸಲು ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯೆ ಮೂಲದ ಈಗ ನೇಪಾಳದಲ್ಲಿ ನೆಲೆಸಿರುವ ಆತ್ಮಾನಂದ ದಾಸ್ ಮಹಾತ್ಯಾಗಿ ಅಲಿಯಾಸ್ ನೇಪಾಳಿ ಬಾಬಾ ಮಹಾ ಯಾಗದ ನೇತೃತ್ವದ ವಹಿಸಲಿದ್ದಾರೆ. ಪ್ರತಿ ವರ್ಷ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಯಾಗ ಮಾಡುತ್ತೇನೆ, ಆದರೆ ಈ ವರ್ಷ, ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭದ ದೃಷ್ಟಿಯಿಂದ ಹೆಚ್ಚಿಸಿದ್ದೇವೆ” ಎಂದು ಹೇಳಿದ್ದಾರೆ
ಇದಕ್ಕೂ ಮುನ್ನ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ೧೦೦೮ ನರ್ಮದೇಶ್ವರ ಶಿವಲಿಂಗಗಳನ್ನು ಸ್ಥಾಪಿಸುವ ಭವ್ಯವಾದ ’ರಾಮ ನಾಮ ಮಹಾ ಯಜ್ಞ’ ಜನವರಿ ೧೪ ರಿಂದ ಜನವರಿ ೨೫ ರವರೆಗೆ ನಡೆಯಲಿದೆ. ಶಿವಲಿಂಗಗಳನ್ನು ಇರಿಸಲು ಈಗಾಗಲೇ ೧೦೦೮ ಗುಡಿಸಲುಗಳನ್ನು ನಿರ್ಮಿಸಲಾಗಿದೆ, ಜೊತೆಗೆ ೧೧ ಪದರಗಳ ಛಾವಣಿಯನ್ನು ಹೊಂದಿರುವ ಭವ್ಯವಾದ ಯಾಗ ಮಂಟಪ ನಿರ್ಮಾಣ ಮಾಡಲಾಗಿದೆ
ರಾಮಮಂದಿರದಿಂದ ೨ ಕಿಮೀ ದೂರದಲ್ಲಿರುವ ಸರಯೂ ನದಿಯ ಮರಳು ಘಾಟ್‌ನಲ್ಲಿ ೧೦೦ ಎಕರೆ ಪ್ರದೇಶದಲ್ಲಿ ಟೆಂಟ್ ಸಿಟಿ ಸ್ಥಾಪಿಸಲಾಗಿದೆ. ಅದರಂತೆ ಪ್ರತಿದಿನ ೫೦ ಸಾವಿರ ಭಕ್ತರಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು, ದಿನಕ್ಕೆ ಸುಮಾರು ೧ ಲಕ್ಷ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ
ಮಹಾಯಾಗ ಮುಗಿದ ನಂತರ ೧೦೦೮ ಶಿವಲಿಂಗಗಳನ್ನು ಸರಯೂ ನದಿಯಲ್ಲಿ ಮುಳುಗಿಸಲಾಗುತ್ತದೆ. ಮಹಾ ಯಾಗದ ಸಮಯದಲ್ಲಿ ಜನವರಿ ೧೭ ರಿಂದ ರಾಮಾಯಣದ ೨೪,೦೦೦ ಶ್ಲೋಕಗಳ ಪಠಣದೊಂದಿಗೆ ’ಹವನ’ ಪ್ರಾರಂಭವಾಗಲಿದ್ದು, ಜನವರಿ ೨೫ ರವರೆಗೆ ನಡೆಯಲಿದೆ.
ಯಜ್ಞಶಾಲೆಯಲ್ಲಿ ನಿರ್ಮಿಸಲಾದ ೧೦೦ ಕೊಳಗಳಲ್ಲಿ ಪ್ರತಿದಿನ ೧೦೦೮ ಶಿವಲಿಂಗಗಳಿಗೆ ಪಂಚಾಮೃತ ಅಭಿಷೇಕ ಮತ್ತು ೧,೧೦೦ ದಂಪತಿಗಳು ರಾಮಮಂತ್ರ ಪಠಣದೊಂದಿಗೆ ಹವನ ಮಾಡುತ್ತಾರೆ.ಶಿವಲಿಂಗಗಳ ಕೆತ್ತನೆಗಾಗಿ ಮಧ್ಯಪ್ರದೇಶದ ನರ್ಮದಾ ನದಿಯಿಂದ ಕಲ್ಲುಗಳನ್ನು ತರಲಾಗಿದೆ. ಜನವರಿ ೧೪ ರೊಳಗೆ ಕೆತ್ತನೆ ಕೆಲಸ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.
ದೇವಾಲಯದ ಪಟ್ಟಣದ ಫಾಟಿಕ್ ಶಿಲಾ ಪ್ರದೇಶದಲ್ಲಿ ಜನಿಸಿದೆ ಮತ್ತು ತಪಸ್ವಿ ನಾರಾಯಣ ದಾಸ್ ಅವರ ಶಿಷ್ಯ ಎಂದು ಆತ್ಮಾನಂದ ದಾಸ್ ಮಹಾತ್ಯಾಗಿ ಹೇಳಿದ್ದಾರೆ ನೇಪಾಳ ರಾಜನು ತನಗೆ ’ನೇಪಾಳಿ ಬಾಬಾ’ ಎಂದು ಹೆಸರಿಸಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ.