ರಾಮರಾಜ್ಯ ಆರಂಭ ದಾಸ್ ಬಣ್ಣನೆ

ಅಯೋಧ್ಯೆ, ಜ. ೨೨-ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ ರಾಮಲಲ್ಲಾ ಪ್ರತಿಷ್ಠಾಪನೆಯಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ರಾಮರಾಜ್ಯ ಶಕೆ ಆರಂಭವಾಗಲಿದೆ ಎಂದು ಪ್ರಧಾನ ಅರ್ಚಕ ಆಚಾರ್ಯ ಅರ್ಚಕ ಸತ್ಯೇಂದ್ರ ದಾಸ್ ಹೇಳಿದರು.
ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯಾಗಿದ್ದು ಇದರೊಂದಿಗೆ ಎಲ್ಲಾ ಅಸಮಾನತೆಗಳು ಅಂತ್ಯಗೊಳ್ಳುತ್ತವೆ. ರಾಮರಾಜ್ಯ ಆರಂಭವಾಗಲಿದೆ ಎಂದು ಸುದ್ಧಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಣ್ಣಿಸಿದ್ದಾರೆ.
ಇನ್ನು ಮುಂದೆ ದೇಶದ ಜನರು ಸಂತೋಷದಿಂದ ಜೀವನ ಸಾಗಿಸುತ್ತಾರೆ. ದೇಶದ ಎಲ್ಲ ಜನರಿಗೂ ರಾಮ ಆಶೀರ್ವದಿಸಲಿದ್ದಾನೆ ಎಂದು ಅವರು ಹೇಳಿದರು.