ರಾಮಮಂದಿರ ನಿರ್ಮಾಣದಿಂದ ದೇಶ ವಿಶ್ವ ವಿಖ್ಯಾತವಾಗಲಿದೆ

ದೇವದುರ್ಗ.ಜ.೬- ಭಾರತದಂತಹ ಪುಣ್ಯ ಭೂಮಿಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾಗುವ ಮುಖಾಂತರ ದೇಶ ಮತ್ತೇ ವಿಶ್ವವಿಖ್ಯಾತವಾಗಲಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷರಾದ ಜಂಬಣ್ಣ ನಿಲಗಲ್ ಅವರು ಹೇಳಿದರು.
ಅವರು ಪಟ್ಟಣದ ಖೇಣೇದ ಫಂಕ್ಷನ ಹಾಲನಲ್ಲಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನವತಿಯಿಂದ ಮಂಗಳವಾರದಂದು ಏರ್ಪಡಿಸಲಾಗಿದ್ದ ರಾಮಮಂದಿರದ ನಿಧಿ ಸಮರ್ಪಣಾ ಮಹಾ ಅಭಿಯಾನದ ದೇವದುರ್ಗ ನಗರ ಮತ್ತು ಗ್ರಾಮಾಂತರದ ಬೈಠಕ್ ಉದ್ದೇಶಿಸಿ ಮಾತನಾಡಿದರು. ಹಲವು ದಶಕಗಳ ಕಾಲ ರಾಮಮಂದಿರ ನಿರ್ಮಾಣಕ್ಕಾಗಿ ಹಲವರು ತ್ಯಾಗ ಮಾಡಿದ್ದಾರೆ. ದೇಶದ ಐಕ್ಯತೆಯನ್ನು ರಾಮಮಂದಿರದ ಮುಖಾಂತರ ಮೂಡಿಸಲು ಬಿಜೆಪಿ ನೇತೃತ್ವದ ಕೇಂದ್ರದಲ್ಲಿನ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದಾರೆ ಎಂದರು.
ಮಂದಿರ ನಿರ್ಮಾಣಕ್ಕಾಗಿ ರೂ, ೧೦, ೧೦೦, ೨೦೦೦ ಸಾವಿರ ರೂ,ಗಳ ಕೂಪನನ ನಿಧಿ ಸಂಗ್ರಹದ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಜನತೆ ಸಹ ರಾಮ ಮಂದಿರ ನಿರ್ಮಾಣಕ್ಕೆ ಪಕ್ಷಾತೀತವಾಗಿ ಕೈ ಜೋಡಿಸುವಂತಹ ಮಹತ್ವವಾದ ಕಾರ್ಯವನ್ನು ಮಾಡಲಾಗುತ್ತಿದೆ. ತಾಲೂಕಿನ ಎಲ್ಲಾ ಗ್ರಾಮಗಳಿಗೆ ತೆರಳಿ ಮುಂದಿನ ದಿನಗಳಲ್ಲಿ ನಿಧಿ ಸಂಗ್ರಹಿಸಲಾಗುವುದೆಂದರು.
ರಾಮ ಮಂದಿರದ ನಿಧಿ ಸಮರ್ಪಣಾ ಮಹಾ ಅಭಿಯಾನದ ಸಂಚಾಲಕರಾದ ಸತೀಶ ಅವರು ಮಾತನಾಡಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಪ್ರತಿ ಮೂಲೆ ಮೂಲೆಯಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶ ವ್ಯಾಪ್ತಿಯ ಪ್ರತಿ ಮನೆ ಮನೆಗೆ ಭೇಟಿ ನೀಡಿ ನಿಧಿ ಸಂಗ್ರಹಿಸಲು ಎಲ್ಲಾ ಸ್ವಯಂ ಸೇವಕರು, ರಾಮ ಭಕ್ತರು ಕೈ ಜೋಡಿಸಬೇಕೆಂದರು.
ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿನ ಹಲವರು ತ್ಯಾಗ ಮಾಡಿದ್ದಾರೆ. ಭಾರತ ದೇಶ ದೇಗುಲಗಳ ನಾಡಾಗಿದೆ. ಶ್ರೀರಾಮನ ಪುಣ್ಯ ಭೂಮಿಯಲ್ಲಿ ನಾವು ಜನಿಸಿರುವುದು ಪುಣ್ಯ, ರಾಮ ಮಂದಿರದಂತಹ ಭವ್ಯವಾದ ದೇಗುಲ ನಿರ್ಮಾಣಕ್ಕೆ ನಮ್ಮ-ನಿಮ್ಮೇಲ್ಲರಿಗೆ ಸೇವಾ ಭಾಗ್ಯ ದೊರಕಿರುವುದು ನಮ್ಮೇಲ್ಲರ ಸೌಭಾಗ್ಯವೆಂದರು.
ಬಿಜೆಪಿ ಮುಖಂಡರಾದ ಅನಂತರಾಜ ನಾಯಕ, ಶ್ಯಾಮರಾವ್ ಕುಲಕರ್ಣಿ, ಡಾ.ಎಚ್.ಎ.ನಾಡಗೌಡ, ರಾಯಚೂರು ಎಪಿಎಂಸಿ ಅಧ್ಯಕ್ಷ ರಾಮನಗೌಡ ಕರಡಿಗುಡ್ಡ, ಲಿಂಗನಗೌಡ ಜೋಳದಹೆಡಗಿ, ದೇವೀಂದ್ರಪ್ಪ ಸಾಸ್ವೀಗೇರಾ, ಶಿವಶಂಕರ ಪಾಟೀಲ್ ಆಲ್ಕೋಡ, ನಾಗರಾಜ ಪಾಟೀಲ್ ಗೋಪಳಾಪೂರು, ಬಸವರಾಜ ಗಾಣಧಾಳ, ಮಲ್ಲಿಕಾರ್ಜುನ ಪಾಟೀಲ್ ಹಿರೇಬೂದೂರು, ಪ್ರಶಾಂತ ಯಾದಗಿರಿ, ಪುರಸಭೆ ನಾಮ-ನಿರ್ದೇಶಿತ ಸದಸ್ಯ ಚಂದ್ರಶೇಖರ ಚೆಲುವಾದಿ, ಬಸವರಾಜ ಮಡಿವಾಳ ಕೊಪ್ಪರ, ಬಸವರಾಜ ಇಟಗಳ್ಳಿ, ಸತೀಶ ಜಾಜಿ ಸಾಹು, ಪ್ರಶಾಂತ ಯಾದಗಿರಿ, ಸೂಗಮ್ಮ ಗದ್ಗಿ, ನಗರ ಮಹಿಳಾಧ್ಯಕ್ಷರಾದ ನವರತ್ನ ಜಾಜಿ, ಹಂಪಮ್ಮ ಹುಲಿಮನಿ ಸೇರಿದಂತೆ ದೇವದುರ್ಗದ ಆರ್‌ಎಸ್‌ಎಸ್, ಹಿಂದೂ ಮಹಾಸಭಾ, ಶ್ರೀ ರಾಮಸೇನೆಯ ಹಲವು ಹಿಂದೂ ಸಂಘಟನೆಯ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪೋಟೋ ೬ಡಿವಿಡಿ೨