ರಾಮಮಂದಿರ ಉದ್ಘಾಟನೆ : ಅಪಸ್ವರ ಎತ್ತಿರುವುದು ಸರಿ ಇದೆ

ರಾಯಚೂರು,ಜ.೧೨- ರಾಮಮಂದಿರ ಉದ್ಘಾಟನೆಯಲ್ಲಿ ಶಂಕರಾಚಾರ್ಯ ಪೀಠಗಳು ಅಪಸ್ವರ ಎತ್ತಿರುವುದು ಸರಿ ಇದೆ ಎಂದು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಸಿದ್ದರಾಮನಂದ ಶ್ರೀಗಳು ಹೇಳಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಹಾಸಂಸ್ಥಾನ ಮಠದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಗಳು, ಶಂಕರಾವಮಚಾರ್ಯ ನಾಲ್ಕು ಪೀಠ ಶ್ರೀಗಳು, ರಾಮಮಂದಿರ ನಿರ್ಮಾಣಕ್ಕೆ ಮೂಲ ಕಾರಣಿಕರ್ತರು. ಇದೀಗ ಅವರು ಅಪಸ್ವರ ಎತ್ತಿರುವುದು ಸರಿ ಅನಿಸುತ್ತಿದೆ. ಹಿಂದು ಸಂಪ್ರದಾಯದ ಪ್ರಕಾರ ಯಾವುದೇ ದೇವಸ್ಥಾನಗಳು ಸಂಪೂರ್ಣ ಕೆಲಸ ಆಗೋವರೆಗೆ ಉದ್ಘಾಟನೆ ಮಾಡುವುದಿಲ್ಲ. ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿರುವುದು ಬೇರೆ ಉದ್ದೇಶ ಇಟ್ಟುಕೊಂಡಿದ್ದಾರೆ ಅನಿಸುತ್ತದೆ. ಬೇರೆ ರೀತಿಯ ಉದ್ದೇಶ ಇಟ್ಟುಕೊಂಡು ರಾಮಮಂದಿರ ಕಟ್ಟುತ್ತಿರುವುದು, ರಾಮಭಕ್ತರಿಗೆ ನೋವನ್ನು ತಂದಿದೆ ಎಂದರು.