ರಾಮಮಂದಿರ: ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್: ಖರ್ಗೆ,ಸೋನಿಯಾ ಹಾಜರಾಗದಿರಲು ನಿರ್ಧಾರ

ನವದೆಹಲಿ,ಜ.10- ಉತ್ತರ ಪ್ರದೇಶದ ಆಯೋದ್ಯೆಯಲ್ಲಿ ಈ ತಿಂಗಳ 22 ರಂದು ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳದೇ ಇರಲು ಕಾಂಗ್ರೆಸ್ ನಿರ್ಧರಿಸಿದೆ.

ಈ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಶ್ರೀರಾಮಮಂದಿರ ಜನ್ಮ ಭೂಮಿ ಟ್ರಸ್ಟ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

ಇದೊಂದು ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ. ಎಂದು ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭಾ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ “ಸ್ಪಷ್ಟ ಪಡಿಸಿದ್ದಾರೆ.

ಈ ಮೂಲಕ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಕಾಂಗ್ರೆಸ್ ಭಾಗವಹಿಸಲಿದೆಯೋ ಅಥವ ಇಲವೋ ಎನ್ನುವ ಊಹಾಪೋಹಳಿಗೆ ಈ ಮೂಲಕ ತೆರೆ ಎಳೆದಿದೆ.

ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಆರೆಸ್ಸೆಸ್ ಬಿಜೆಪಿ ಕಾರ್ಯಕ್ರಮಕ್ಕೆ” ಆಹ್ವಾನ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಮಾಹಿತಿ ಮತ್ತು ಸಂಪಕರ್ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸ್ಪಷ್ಡಪಡಿಸಿದ್ದಾರೆ.

ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಅವರಿಗೆ ಪ್ರತ್ಯೇಕವಾಗಿ ಆಹ್ವಾನ ನೀಡಲಾಗಿತ್ತು.

ಇಂಡಿಯಾ ಮೈತ್ರಿಕೂಟದ ಅನೇ ಪಕ್ಷಗಳ ನಾಯಕರು ಆಹ್ವಾನ‌ ನೀಡುವ ಮುನ್ನ ತಾವು ಯಾವುದೇ ಕಾರಣಕ್ಕೂ ಭಾಗಿಯಾಗುವುದಿಲ್ಲ. ಇಧು ಪಕ್ಷವೊಂದರ ಕಾರ್ಯಕ್ರಮ ಎನ್ನುವ ಸಬೂಬು ನೀಡಿದ್ದರು.

ಇಂಡಿಯಾ ಮೈತ್ರಿಕೂಟದ ಕೆಲವು ನಾಯಕರು ಕಾಂಗ್ರೆಸ್ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗಿಯಾಗುವಂತೆ ಶಿವಸೇನೆಯ ಉದ್ದವ್ ಠಾಕ್ರ ಮನವಿ ಮಾಡಿದ್ದರು.

ರಾಮನ ದೇಶದ ಎಲ್ಲರಿಗೂ ಸೇರಿದವ‌, ರಾಮನ ಕಾಂಗ್ರೆಸ್ ಕೂಡಗೌರವಿಸಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಾಗಿಯಾಗಬೇಕು ಎಂದು ಹೇಳಿದ್ದರು.

ಮುಂದೆ ಪಶ್ಚಾತ್ತಾಪ: ಪುರಿ

ರಾಮಮಂದಿರ ‘ಪ್ರಾಣ ಪ್ರತಿಷ್ಠಾನ’ ಆಹ್ವಾನವನ್ನು ಕಾಂಗ್ರೆಸ್ ನಿರಾಕರಿಸಿದ್ದು ಅದಕ್ಕಾಗಿ ಮುಂದೆ ಕಾಂಗ್ರೆಸ್ ಪಶ್ಚಾತ್ತಾಪ ಪಡಲಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಹೇಳಿದ್ದಾರೆ.

ಅವರು ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ .ರಾಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗದಿದ್ದರೆ ವಿಷಾದಿಸುತ್ತಾರೆ” ಎಂದು ಹೇಳಿದ್ದಾರೆ.