ರಾಮಮಂದಿರದಲ್ಲಿ ರಾಮಮಂತ್ರ ಪಾರಾಯಣ

ಕಲಬುರಗಿ,ಏ.17 : ರಾಮ ನವಮಿ ನಿಮಿತ್ತ ಇಂದು ನಗರದ ರಿಂಗ ರಸ್ತೆಯ ರಾಮ ಮಂದಿರದಲ್ಲಿ ಹಂಸನಾಮಕ ಮತ್ತು ಲಕ್ಷ್ಮೀ ನಾರಾಯಣ ಪಾರಾಯಣ ಸಂಘದ ವತಿಯಿಂದ ರಾಮರಕ್ಷ ಸ್ತೋತ್ರ, ರಾಮಮಂತ್ರ, ವಿಷ್ಣು ಸಹಸ್ರನಾಮ, ಸುಂದರ ಕಾಂಡ,ಲಕ್ಷ್ಮೀ ಸ್ತೋತ್ರ ಪಾರಾಯಣ ಜರುಗಿತು.ಪಾರಾಯಣ ಸಂಘದ ಸಂಚಾಲಕ ರವಿ ಲಾತೂರಕರ,ಡಾ ಕೃಷ್ಣ ಕಾಕಲವಾರ, ಪದ್ಮನಾಭ ಆಚಾರ್ಯ ಜೋಶಿ,ರಾಮಾಚಾರ್ಯ ನಗನೂರ, ವಿಜಯಕುಮಾರ ಕುಲಕರ್ಣಿ, ಕಿಶೋರ ದೇಶಪಾಂಡೆ, ಶಾಮಸುಂದರ ಕುಲಕರ್ಣಿ, ಡಾ.ಶ್ರೀನಿವಾಸರಾವ ಜಾಗೀರದಾರ,ನರಸಿಂಗರಾವ ಕುಲಕರ್ಣಿ, ಅನಿಲ ಕುಲಕರ್ಣಿ, ಅನಿರುದ್ಧ,ಸಂಕರ್ಷಣ, ಸತ್ಯಬೋಧ,ಅನಂತ ಚಿಂಚನಸುರ,ಕೆ.ಬಿ ಕುಲಕರ್ಣಿ, ಆರ್.ಕೆ ಕುಲಕರ್ಣಿ ಉಪಸ್ಥಿತರಿದ್ದರು.