ರಾಮನ ಹುಟ್ಟುಹಬ್ಬ ಅಚರಣೆ

ಬಂಗಾರಪೇಟೆ.ಏ೧೮:ವಿಷ್ಣುವಿನ ಪರಮ ಅವತಾರ ಶ್ರೀರಾಮ ಚಂದ್ರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದರೆಂಬ ಪ್ರತೀತಿ ಇದ್ದು, ಇಡೀ ದೇಶವೇ ರಾಮನ ಭಕ್ತಿಯಲ್ಲಿ ಪರವಶವಾಗಿದೆ. ಶ್ರೀರಾಮ ಪ್ರಭು ಪಿತೃವಾಕ್ಯ ಪರಿಪಾಲನೆ, ರಾಜ್ಯಾಡಳಿತ, ಪ್ರಜಾಪರಿಪಾಲನೆ, ಕರ್ತವ್ಯ, ಗೌರವ, ಏಕಪವ್ರತ, ಸೋದರಪ್ರೇಮ ಹೀಗೇ ಅನೇಕ ವಿಚಾರದ ಶ್ರೀರಾಮ ನಮ್ಮೆಲ್ಲರಿಗೂ ಆದರ್ಶ. ಹೀಗಾಗಿಯೇ ಆತನ ಹುಟ್ಟುಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ಜೈ ಹನುಮಾನ್ ಸೇನೆ ಕಾರ್ಯದರ್ಶಿ ಹುಣಸನಹಳ್ಳಿ ವೆಂಕಟೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಮುಂಭಾಗ ಜೈ ಹನುಮಾನ್‌ಸೇನೆ ಹಾಗೂ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಪೂಜಾ ವಿಧಿವಿಧಾನಗಳು ನೆರವೇರಿಸಿ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗಿಸಿ ಮಾತನಾಡಿ, ಶ್ರೀರಾಮ ಪ್ರಭು ಒಂದು ವರ್ಗಕ್ಕೆ ಸೀಮಿತವಾದವರಲ್ಲ ‘ವಸುದೈವ ಕುಟುಂಬಕಂ’ ಅಡಿಯಲ್ಲಿ ಆರಾಧಿಸುವ ಕಲಿಯುಗದ ಆರಾಧ್ಯ ದೈವ.
ಜೈ ಹನುಮಾನ್ ಸೇನೆಯ ಅಧ್ಯಕ್ಷ ಸತೀಶ್ ಮಾತನಾಡಿ, ಶ್ರೀರಾಮನ ಹಬ್ಬದ ಉದ್ದೇಶ ದುಷ್ಟರ ಮೇಲೆ ಒಳ್ಳೆಯತನದ ವಿಜಯ. ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವನ್ನು ಸೂಚಿಸುತ್ತದೆ. ಈ ಭಾರಿ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಸಕಾಲಕ್ಕೆ ಮಳೆ ಬೆಳೆ ಆಗಲಿ ಎಂದು ಪ್ರಾರ್ಥಿಸಲಾಗಿದೆ. ಮೊಟ್ಟ ಮೊದಲ ಭಾರಿಗೆ ೩ಸಾವಿರ ಎಳೆನೀರು, ಪಾನಕ, ಕೋಸಂಬರಿ, ಮಜ್ಜಿಗೆ ವಿನಿಯೋಗಿಸಲಾಗಿದೆ ಎಂದರು. ಮಾರುತಿ ಪ್ರಸಾದ್, ಹುಣಸನಹಳ್ಳಿ ಸತೀಶ್, ಹುಳದೇನಹಳ್ಳಿ ವೆಂಕಟೇಶ್, ಮಣಿ, ನವೀನ್, ಮಧುಸೂದನ್, ರಾಮಪ್ರಸಾದ್, ಲೀಲಾವತಿ, ಗೌರವಾಧ್ಯಕ್ಷ ಶಿವಣ್ಣ, ಸಂತೋಷ್, ಅಂಜನ್, ಧರ್ಮಸಿಂಗ್, ರವಿ, ಎಳೆನೀರು ನಾಗೇಂದ್ರ, ಜೆಸಿಬಿ ಪ್ರಸಾದ್, ಪಾನಿಪುರಿ ಮಂಜು ಇತರರು ಉಪಸ್ಥಿತರಿದ್ದರು.