
ಚಾಮರಾಜನಗರ, ಮೇ.04:- ರಾಮನ ಬಂಟ ಹನುಮನೇ ಬೇಡ ಎಂದರೆ ಹೇಗೆ..? ಎಂದು ಭಜರಂಗದಳ ನಿμÉೀಧ ಎಂಬ ಕಾಂಗ್ರೆಸ್ ಪ್ರಣಾಳಿಕೆಗೆ ಚಾಮರಾಜನಗರ ಹಾಗೂ ವರುಣ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಟಾಂಗ್ ಕೊಟ್ಟಿದ್ದಾರೆ.
ಚಾಮರಾಜನಗರದಲ್ಲಿ ಪ್ರಚಾರ ನಡೆಸಿ ಮಾಧ್ಯಮದರೊಂದಿಗೆ ಮಾತನಾಡಿದ ಸಚಿವ ವಿ. ಸೋಮಣ್ಣ, ಕಾಂಗ್ರೆಸ್ ಪಕ್ಷದವರು ಒಂದೊಂದು ದಿನ ಒಂದೊಂದು ಮಾತಾಡ್ತಾ ಇದ್ದಾರೆ. ಇದೇನಾ 75 ವರ್ಷ ಆಡಳಿತ ನಡಿಸಿದವರ ರೀತಿ, ದೇವರು, ಸತ್ ಸಂಪ್ರದಾಯಗಳೇ ಬೇಡ ಎಂದರೆ ಈ ದೇಶಕ್ಕೆ ಭವಿಷ್ಯ ಇರುತ್ತಾ? ಎಂದು ಕಿಡಿಕಾರಿದರು.
ಸತ್ಸಂಪ್ರದಾಯಗಳು ಭಾರತೀಯರ ಕೊಡುಗೆಯಾಗಿದೆ, ರಾಮನ ಭಕ್ತ ಹನುಂತನೂ ಬೇಡ ಅಂದ್ರೆ ಹೇಗೆ? ಇವರ ಮನೇಲಿ ಪೂಜೆ ಮಾಡಲ್ವಾ, ಕುಂಕುಮ ಹಾಕಲ್ವಾ ವಿಭೂತಿ ಬಳಸಳ್ವಾ? ಇದೇನಿದು ಇವರು ದಿನಕ್ಕೊಂದು ರೀತಿ ಆಡ್ತಾರೆ, ನಾವೇನೂ ಅಭಿವೃದ್ಧಿ ಮಾಡಿದ್ದೇವೆ, ಅವರೇನೂ ಅಭಿವೃದ್ಧಿ ಮಾಡಿದ್ದಾರೆ ಈ ವಿಚಾರ ಇಟ್ಟುಕೊಂಡು ಚುನಾವಣೆಗೆ ಹೋಗಲಿ ಎಂದರು.
ಶಾಸಕ ಸ್ಥಾನ ಎಂದರೆ ಅದು ಉದ್ಯೋಗ ಅಲ್ಲ, ಜನರ ಸೇವೆಗೆ ಸಿಗುವ ಅವಕಾಶ. ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್ ಪ್ರಣಾಳಿಕೆಗೆ ಅಸಮಾಧಾನ ಹೊರಹಾಕಿದರು.
ಬಿರುಸಿನ ಪ್ರಚಾರದಲ್ಲಿ ತೊಡಗಿರುವಸೋಮಣ್ಣ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಕೊನೆ ಹಂತದ ಪ್ರಚಾರದಲ್ಲಿ ತೊಡಗಿರುವ ಸೋಮಣ್ಣ, ಕಳೆದ ಎರಡು ದಿನಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಅಲ್ಲದೇ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿರುವ ಸೋಮಣ್ಣ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿಯನ್ನು ಗೆಲ್ಲಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಚಾಮರಾಜನಗರದ ಎಲ್ಲಾ ಊರುಗಳಿಗೆ, ಜಿಪಂ, ತಾಪಂ ಕೇಂದ್ರಗಳಿಗೆ ಒಂದು ಬಾರಿ ಭೇಟಿ ಕೊಟ್ಟು ಸೋಮಣ್ಣ ಮತಬೇಟೆ ನಡೆಸಿದ್ದಾರೆ