ರಾಮನ ಪೂಜೆ ಮರೆಯಲಾರದ ದಿನ

ಕೋಲಾರ,ಜ,೨೩:ನಂಬಿಕೆ ಮತ್ತು ಏಕತೆಯ ಪ್ರತೀಕವಾದ ಮಾರ್ಯದಾಪುರುಷ,ಹಿಂದುಗಳ ಆರಾಧ್ಯದೈವ ,ಆದರ್ಶಪುರುಷರಾದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಇಂದು ಆಯೋಧ್ಯೆಯಲ್ಲಿ ಮಾಡಿರುವ ಹಿನ್ನಲೆಯಲ್ಲಿ ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿ ರಾಜ್ಯಗಳಲ್ಲಿ ಜಿಲ್ಲೆಗಳಲ್ಲಿ ಶ್ರೀರಾಮನ ಹಬ್ಬದ ಆಚರಣೆ ಮಾಡುತ್ತಿರುವುದು ಮರೆಯಲಾಗದ ಇತಿಹಾಸ ದಾಖಲೆಯಾಗಿದೆ ಎಂದು ಸಮಾಜ ಸೇವಕ ಹಾಗೂ ಜೆ.ಡಿ.ಎಸ್. ಮುಖಂಡ ಸಿ.ಎಂ.ಆರ್. ಶ್ರೀನಾಥ್ ಅಭಿಪ್ರಾಯ ಪಟ್ಟರು,
ನಗರದ ಎ.ಪಿ.ಎಂ.ಸಿ. ಮಾರುಕಟ್ಟೆಯ ಸಿ.ಎಂ.ಆರ್. ಮಂಡಿಯಲ್ಲಿ ಆಯೋಜಿಸಿದ್ದ ಶ್ರೀರಾಮ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾದ್ಯಮದವರೊಂದಿಗೆ ಅವರು ಮಾತನಾಡಿ ಆಯೋದ್ಯೆಯಲ್ಲಿ ೫ ಶತಮಾನಗಳ ನಂತರ ಶ್ರೀರಾಮಮಂದಿರ ಪುನರ್ ನಿರ್ಮಾಣವು ಹಿಂದುಗಳು ಹೆಮ್ಮೆ ಪಡುವಂತ ಸಂಗತಿಯಾಗಿದೆ ಎಂದರು.
ನಗರದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿನ ಸಿ.ಎಂ.ಆರ್.ಟಮ್ಯಾಟೋ ಮಂಡಿಯಲ್ಲಿ ಎಲ್ಲಾ ರೈತರು, ಕೊಲಿ ಕಾರ್ಮಿಕರು, ಖರೀದಿದಾರರು, ಮಂಡಿ ಮಾಲೀಕರ ಸಂಯುಕ್ತಾಶ್ರಯದಲ್ಲಿ ಶ್ರೀರಾಮನ ವಿಶೇಷ ಪೂಜಾ ಕಾರ್ಯಕ್ರಮವನ್ನು ಲೋಕ ಕಲ್ಯಾಣಕ್ಕಾಗಿ ಭಕ್ತಿಪೂರ್ವಕವಾಗಿ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಪಾನಕ, ಪನ್ನಿಹಾರ, ಪ್ರಸಾದ ವಿನಿಯೋಗವನ್ನು ವಿತರಿಸಲಾಗಿದೆ. ಇದೇ ರೀತಿ ವಿಶ್ವದ ಎಲ್ಲೆಡೆ ಆಚರಿಸಲಾಗುತ್ತಿದೆ. ವಿಶ್ವದಲ್ಲಿ ಎಲ್ಲ ಧರ್ಮಗಳ ಮೇಲೂ ಶ್ರೀರಾಮನ ಆಶೀರ್ವಾದ ದಿಂದ ಸುಖ, ಶಾಂತಿ, ನೆಮ್ಮದಿ ದೊರೆಯುವಂತಾಗಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಕೆ ಮಾಡಿದರು,
ನಂತರ ಟೇಕಲ್ ರಸ್ತೆಯಲ್ಲಿನ ಪೇಟೆ ಚಾಮನ ಹಳ್ಳಿಯ ಮೇಲ್ಸೇತುವೆ ಬಳಿ ಆಯೋಜಿಸಲಾಗಿದ್ದ ಶ್ರೀರಾಮ ಚಂದ್ರ ಮೂರ್ತಿಯ ವಿಶೇಷ ಪೂಜೆಗೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಮುಖಂಡರಾದ ಮಾಜಿ ನಗರಸಭಾ ಸದಸ್ಯ ಬಲರಾಮಪ್ಪ,ರಾಧಕೃಷ್ಟ, ದರಖಾಸ್ತು ಸಮಿತಿ ಮಾಜಿ ಅಧ್ಯಕ್ಷ ಬೆಗ್ಲಿಸೂರ್ಯ ಪ್ರಕಾಶ್, ದಿಶಾ ಸಮಿತಿ ಸದಸ್ಯರಾದ ಅಪ್ಪಿನಾರಾಯಣಸ್ವಾಮಿ, ಸೂರ್ಯನಾರಾಯಣ್ ಮುಂತಾದವರು ಭಾಗವಹಿಸಿದ್ದರು,