ರಾಮನ ಪರಿಚಯ ಮಾಡಿದ ವಾಲ್ಮೀಕಿಗೆ ಗೌರವ

ಸೈದಾಪುರ:ಜ.1: ಅಯೋಧ್ಯೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ನಾಮಾಕರಣ ಮಾಡಿರುವುದು ರಾಮಾಯಣ ಎಂಬ ಮಾಹಕಾವ್ಯದ ಕರ್ತೃ ವಾಲ್ಮೀಕಿಗೆ ಸಲ್ಲಿಸಿದ ಗೌರವ ಎಂದು ವಾಲ್ಮೀಕಿ ಸಮುದಾಯದ ಮುಖಂಡ ಚಂದ್ರಶೇಖರ ಕರಣಿಗಿ ಅಭಿಪ್ರಾಯಪಟ್ಟರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಾಲ್ಮೀಕಿ ಸಮುದಾಯ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತವನ್ನು ವಿಶ್ವ ಗಮನಿಸುವಂತೆ ಮಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಅಭಿನಂದನೆಗಳು ಜೊತೆಗೆ ಸ್ವಾಗತಾರ್ಹವಾಗಿದೆ ಹಾಗೂ ನಮಗೆಲ್ಲ ಸಂತಸತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ, ಪುμÁ್ಪರ್ಚನೆ ಸಲ್ಲಿಸಿ ಜೈಘೋಷಣೆ ಕೂಗಿ, ಸಿಹಿ ಹಂಚಿ ಸಂಭ್ರಮಿಸಿದರು. ಬಸವರಾಜ ನಾಯಕ ,ಆಂಜನೇಯ ನಾಯಕ ಮಲ್ಹಾರ, ಹಣಮಂತರೆಡ್ಡಿ ನಾಯಕ, ವಸಂತಕುಮಾರ ನಾಯಕ, ಲಕ್ಷ್ಮಣ ನಾಯಕ ಓಬಳಾಪುರ ನೀಲಹಳ್ಳಿ, ಅಮರೇಶ ನಾಯಕ ಕೂಡ್ಲೂರು, ಭೀಮಶಪ್ಪ ನಾಯಕ, ಯಲ್ಲಪ್ಪ ನಾಯಕ, ವಿಜಯಕುಮಾರ ನಾಯಕ, ಮಲ್ಲು ಬೆಳಗುಂದಿ, ಮಧು, ವಿರೂಪಾಕ್ಷ ಸೇರಿದಂತೆ ಇತರರಿದ್ದರು.