ರಾಮನಾಮ ಲಿಜೋ ಪ್ರಾಣಿ ಕೋಟಿ ಪಾಪಕಟೆ

ಆಳಂದ:ಎ.22: ರಾಮನಾಮ ಜೋ ಲಿಜೋ ಪ್ರಾಣಿ ಕೋಟಿ ಪಾಪಕಟೆ (ಯಾವುದೇ ಜೀವಿ ರಾಮ ನಾಮಸ್ಮರಣೆ ಮಾಡಿದರೆ ಕೋಟಿ ಪಾಪಗಳ ನಾಶ) ಎಂದು ವಿಶ್ವಹಿಂದೂ ಪರಿಷತ್ ಕಾರ್ಯಕರ್ತ ಗಣೇಶ ಬೋಸ್ಲೆ ಅವರು ಹೇಳಿದರು.
ಪಟ್ಟಣದ ಹಳೆಯ ಪೊಲೀಸ್ ಚೌಕಿಯ ಗಣೇಶ ಮಂದಿರದಲ್ಲಿ ಶ್ರೀರಾಮ ನವಮಿ ನಿಮಿತ್ತ ಆಯೋಜಿಸಿದ್ದ ಶ್ರೀರಾಮನ ಭಾವಚಿತ್ರದ ಪೂಜೆಯಲ್ಲಿ ಅವರು ಮಾತನಾಡಿದರು.
ಹಿಂದುಗಳ ಆರಾಧ್ಯ ದೈವ ಶ್ರೀರಾಮನ ತತ್ವಾದರ್ಶಗಳನ್ನು ಭಾರತೀಯ ಸಂಸ್ಕøತಿಯ ಪ್ರತಿಕವಾಗಿವೆ. ಅವರ ಹಾಕಿಕೊಟ್ಟ ಮಾರ್ಗವನ್ನು ಅನುಸರಿಸಿ ರಾಮರಾಜ್ಯವನ್ನು ಸ್ಥಾಪಿಸಲು ಮುಂದಾಗಬೇಕಾಗಿದೆ ಎಂದರು.
ಮುಖಂಡ ಮಲ್ಲಿಕಾರ್ಜುನ ಕರಲಗಿ, ಓಂಕಾರ ಕಾಂಬಳೆ, ಶಿಕ್ಷಕ ಸತೀಶ ಮೇತ್ರೆ, ಅನಿಲ ರಂಗದಾಳ, ಶ್ರೀಕಾಂತ ಹೊಸಳ್ಳಿ, ಕಮಲೇಶ ದೇಶಮಾನೆ ಮತ್ತು ಅಮರ ಬುದ್ಧರಪ್ಪ ಮತ್ತಿತರು ಉಪಸ್ಥಿತರಿದ್ದರು.