
ಕಲಬುರಗಿ,ಮಾ.28: ನಗರದಲ್ಲಿ ಮಾರ್ಚ್ 30ರಂದು ಮಧ್ಯಾಹ್ನ ರಾಮನವಮಿ ಪ್ರಯುಕ್ತ 9ನೇ ವರ್ಷದ ರಾಮನವಮಿ ಅಂಗವಾಗಿ ಭವ್ಯ ಶೋಭಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ರಾಜು ಭವಾನಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12 ಗಂಟೆಯಿಂದ ನಗರದ ನಗರೇಶ್ವರ್ (ಗಂಜ್) ಶಾಲೆಯಿಂದ ಹುಮ್ನಾಬಾದ್ ಬೇಸ್, ಚೌಕ್, ಸೂಪರ್ ಮಾರ್ಕೆಟ್ ಮಾರ್ಗವಾಗಿ ಜಗತ್ ವೃತ್ತದವರೆಗೆ ಶ್ರೀರಾಮನ 15 ಅಡಿಯ ಮೂರ್ತಿಯ ಭವ್ಯ ಮೆರವಣಿಗೆ ಜರುಗಲಿದೆ ಎಂದರು.
ಜಿಲ್ಲೆಯ ಸಮಸ್ತ ಮಠಾಧೀಶರು, ವಿಶೇಷವಾಗಿ ಮಹಾರಾಷ್ಟ್ರದ ಅಕೋಲಾದ ಕಾಲಿಚರಣ್ ಮಹಾರಾಜ್ ಅವರು ಭಾಗಿಯಾಗುವರು. ಗಣ್ಯರು ಪಾಲ್ಗೊಳ್ಳುವರು. ಸದರಿ ಕಾರ್ಯಕ್ರಮದಲ್ಲಿ ಅನೇಕ ರೀತಿಯ ಸಾಂಸ್ಕøತಿಕ ಚಟುವಟಿಕೆಗಳು ಜರುಗಲಿವೆ. ವಿಶೇಷವಾಗಿ 100 ಜನ ಹೆಣ್ಣು ಮಕ್ಕಳ ಮತ್ತು ಗಂಡು ಮಕ್ಕಳ ನಾಸಿಕ್ ಡೋಲ್ ಪದಕ, ವಾದ್ಯ ಮೇಳಗಳೊಂದಿಗೆ ಶೋಭಾಯಾತ್ರೆ ನೆರವೇರಲಿದೆ ಎಂದು ಅವರು ಹೇಳಿದರು.
ಇದರ ಜೊತೆಗೆ ತಂಪು ಪಾನೀಯ, ಪ್ರಸಾದದೊಂದಿಗೆ ಮೆರವಣಿಗೆ ಮಾಡಲಾಗುವುದು. ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದೀಪಕ್ ಬಲದವಾ, ಮಲ್ಲಿಕಾರ್ಜುನ್ ಡೋಲೆ, ಶಿವಾ ಗುತ್ತೇದಾರ್, ಶ್ರೀಧರ್ ಸಲಗರ್, ಅಪ್ಪು ಗುಬ್ಯಾಡ್, ಲಕ್ಷ್ಮೀಕಾಂತ್ ಸ್ವಾದಿ ಮುಂತಾದವರು ಉಪಸ್ಥಿತರಿದ್ದರು.