ರಾಮನವಮಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ

ಕಲಬುರಗಿ.ಮಾ.29:ಇದೇ ಮಾರ್ಚ್ 30ರಂದು ರಾಮನವಮಿ ಇರುವ ಪ್ರಯುಕ್ತ ಸದರಿ ದಿನದÀÀಂದು ಕಲಬುರಗಿ ನಗರದಲ್ಲಿರುವ ಎಲ್ಲಾ ಕಸಾಯಿ ಖಾನೆ ಮತ್ತು ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ ಯಾವುದೇ ರೀತಿಯ ಪ್ರಾಣಿ ವಧೆ ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಅಂಗಡಿ ಹಾಗೂ ಕಸಾಯಿ ಖಾನೆಗಳ ಮಾಲೀಕರು ಈ ಆದೇಶ ಉಲ್ಲಂಘಿಸಿದಲ್ಲಿ ಕೆ.ಎಂ.ಸಿ. ಕಾಯ್ದೆ 1976ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.