ರಾಮನವಮಿ ಪ್ರಯುಕ್ತ ಭವ್ಯ ಮೆರವಣಿಗೆ

ಔರಾದ : ಮಾ.31: ಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳ ಯುವ ಒಕ್ಕೂಟದ ವತಿಯಿಂದ ರಾಮ ನವಮಿ ನಿಮಿತ್ತ ಭವ್ಯ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಪಟ್ಟಣದ ದತ್ತ ಮಂದಿರದಲ್ಲಿ ಶ್ರೀ ರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ಹನುಮಾನ ಮಂದಿರಕ್ಕೆ ತಲುಪಿತು. ನೂರಾರು ಯುವಕರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಡಿಜೆ ಹಾಡು, ಯುವಕರ ಕುಣಿತ, ಕೇಸರಿ ಧ್ವಜ ಹಾರಾಟ ಜೋರಾಗಿತ್ತು. ಮೆರವಣಿಗೆಗೆ ಮುನ್ನ ಮುಂಜಾನೆ ಬೈಕ್ ರ್ಯಾಲಿ ಜರುಗಿತು.

ನಂತರ ಪಟ್ಟಣದ ಹನುಮಾನ ಮಂದಿರದಲ್ಲಿ ವಿಶೇಶ ಪೂಜೆ ಸಲ್ಲಿಸಿ ಮೆರವಣಿಗೆ ಸಮಾರೋಪ ಜರುಗಿತು. ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಯುವಕರು ಪಾಲ್ಗೊಂಡಿದ್ದರು.