ರಾಮನವಮಿ ನಿಮಿತ್ಯ ವೈಭವದ ಶೋಭಾ ಯಾತ್ರೆ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ:ಮೇ.2: ಪಟ್ಟಣದ ರಾಮ ಮಂದಿರದಲ್ಲಿ ವಿಶ್ವಹಿಂದೂ ಪರಿಷತ್ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಆಚರಿಸಲಾಗುತ್ತಿರುವ ರಾಮನವಮಿ ಉತ್ಸವ ನಿಮಿತ್ಯ ಬುಧವಾರ ವೈಭವದ ಶೋಬಾಯಾತ್ರೆ ನಡೆಯಿತು.
ಶೋಭಾಯಾತ್ರೆಗೆ ವಿಶ್ವಹಿಂದೂ ಪರಿಷತ್ ಮುಖಂಡರಾದ ಸತೀಶ ನೌಬಾದೆ, ಉತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಶಿವು ಲೋಖಂಡೆ, ಮಾತೃಶಕ್ತಿ ಸ್ವಾಗತ ಸಮಿತಿಯ ಅಧ್ಯಕ್ಷೆ ಸುನಿತಾ ಕುಡತೆ, ಮಾತೃಶಕ್ತಿ ಉತ್ಸವ ಸಮಿತಿಯ ಕಾರ್ಯಧ್ಯಕ್ಷೆ ಶುಭಾಂಗಿ ಚನ್ನಬಸವಣ್ಣ ಬಳತೆ, ಯುವ ಮುಖಂಡ ಪ್ರಸನ್ನ ಪ್ರಕಾಶ ಖಂಡ್ರೆ ಸೇರಿದಂತೆ ವಿವಿದ ಮುಖಂಡರು ಚಾಲನೆ ನೀಡಿದರು.
ಶೋಭಾಯಾತ್ರೆಗೆ ಹಳೆ ಪಟ್ಟಣದ ವಿಠಲ ಮಂದಿರದಲ್ಲಿ ಚಾಲನೆ ನೀಡಿ, ಚೌಡಿ ವೃತ್ತದಿಂದ ತೀನ ದುಕಾನ ಗಲ್ಲಿಯ ಮೂಲಕ ಸಾಗಿ ಗಡಿ, ಪುರಸಭೆ ಕಾರ್ಯಾಲಯ, ಬಸ್ ನಿಲ್ದಾಣ, ಡಾ| ಬಿ.ಆರ್.ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತದ ಮೂಲಕ ರಾಮ ಮಂದಿರದಲ್ಲಿ ಸಮಾವೇಶ ಗೊಂಡಿತು. ಶೋಭಾಯಾತ್ರೆಯ ಸಮಯದಲ್ಲಿ ವಿವಿಧ ಸಂಘಟನೆಯ ಪ್ರಮುಖರು, ದಾರಿಯುದ್ದಕ್ಕೂ ತಣ್ಣನೆಯ ಕುಡಿಯವ ನೀರು, ತಂಪಾದ ಮಜ್ಜಿಗೆ ವ್ಯವಸ್ಥೆ ಮಾಡಿದರು.
ಶೋಭಾ ಯಾತ್ರೆಯಲ್ಲಿ ಮಹಿಳೆಯರಿಂದ ದಾಂಡಿ ನೃತ್ಯ, ಮತ್ಸಕಲಾ ತಂಡದ ಕಲಾವಿದರಿಂದ ವಿವಿಧ ನೃತ್ಯಗಳನ್ನು ನಡೆದವು. ಕಲಾತಂಡದವರೊಂದಿಗೆ ಉಗ್ರ ನರಸಿಂಹ ವೇಷಧಾರಿ, ಹನುಮಾನ ವೇಶಧಾರಿಗಳು, ರಾಮಸೀತೆಯರ ಮೂರ್ತಿಗಳು ಗಮನ ಸೆಳೆದವು. ಹಿಂದೂಪರ ಗೀತೆಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸತೀಶ ನೌಬಾದೆ. ಸೋಮನಾಥಪ್ಪ ಅಸ್ಟೂರೆ, ಬಾಬುರಾವ ಧೂಪೆ, ಮಾತೃಶಕ್ತಿ ಸ್ವಾಗತ ಸಮಿತಿಯ ಸಹಕಾರ್ಯದರ್ಶಿ ಶುಭಾಂಗಿ ಚನ್ನಬಸವಣ್ಣ ಬಳತೆ, ಶುಭಾಂಗಿ ಅಶ್ವಿನ ಭೋಸಲೆ, ಪ್ರಿಯಾ ದಶಮುಖೆ, ಉಮಾಕಾಂತ ಮೇತ್ರೆ, ವಿಲಾಸ ಬಕ್ಕಾ, ಶೈಲೇಶ ಮಾಲಪಾಣಿ, ಶ್ರೀನಾಥ ಹೆಡಾ, ರವಿ ಕುಂಬಾರ, ಸಚಿನ ಜಾಧವ, ಜಯಕಿಶನ ಬಿಯಾನಿ, ಪ್ರಮುಖರಾದ ಸಾಗರ ಮಲಾನಿ, ಶೈಲೇಶ ಮಾಲಪಾಣಿ, ಜಗದೀಶ ಭೂರೆ, ಸಂಗಮೇಶ ಕಾರಾಮುಂಗೆ ಮತ್ತಿತರರು ಇದ್ದರು. ಚುನಾವಣೆ ಸಮಯವಿದ್ದುದರಿಂದ ಶೋಭಾಯಾತ್ರೆ ಮೆರವಣಿಗೆಗೆ ವ್ಯಾಪಕ ಬಿಗಿ ಬಂದೋಬಸ್ತ ಒದಗಿಸಲಾಯಿತು.