(ಸಂಜೆವಾಣಿ ವಾರ್ತೆ)
ಇಂಡಿ :ಅ.24: ಈ ಭಾಗದ ಸಾವಿರಾರು ಜನರು ಸೊಲ್ಲಾಪುರ ಹಾಗೂ ಬೆಂಗಳೂರು, ಮೈಸೂರು ಹೋಗುತ್ತಾರೆ, ಇದನ್ನು ಮನಗಂಡು ಬಸವ ಎಕ್ಸ್ ಪ್ರೆಸ್ ರೈಲು ಇಂಡಿ ತಾಲ್ಲೂಕಿನ ನಿಂಬಾಳ ರೈಲು ನಿಲ್ದಾಣದಲ್ಲಿ ನಿಲುಗಡೆ ಆಗುವುದರಿಂದ ಈ ಬಾಗದ ಜನರಿಗೆ ಅನುಕೂಲವಾಗುತ್ತದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು ತಾಲ್ಲೂಕಿನ ಸುಕ್ಷೇತ್ರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಹಾ ತಪಸ್ಸಿವಿ ಶ್ರೀ ಗುರು ರಾಮದೇವ್ ಮಾಹಾರಾಜರ ಪುಣ್ಯ ಕ್ಷೇತ್ರವಾದ ನಿಂಬಾಳ ರೈಲು ನಿಲ್ದಾಣದಲ್ಲಿ ಬಾಗಲಕೋಟ -ಸೋಲ್ಲಾಪೂರ-ಮೈಸೂರು ಬಸವ ಎಕ್ಸ್ ಪ್ರೆಸ್ ರೈಲು ನಿಲುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿಜಯಪೂರ ರೇಲ್ವೆ ಸಾರಿಗೆಯು ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ವಿಶ್ವಾಸಾರ್ಹ ಸಾರಿಗೆ ವಿಧಾನಗಳಲ್ಲಿ ಒಂದಾಗಿದೆ. ರೈಲುಗಳು ವೇಗವಾಗಿರುತ್ತವೆ ಮತ್ತು ಇತರ ಸಾರಿಗೆ ಕಾರ್ಯವಿಧಾನಗಳಿಗೆ ಹೋಲಿಸಿದರೆ ಮಳೆ ಅಥವಾ ಮಂಜಿನಂತಹ ಸಾಮಾನ್ಯ ಹವಾಮಾನ ಪ್ರಕ್ಷುಬ್ಧತೆಯಿಂದ ಕಡಿಮೆ ಪರಿಣಾಮ ಬೀರುತ್ತವೆ. ರೈಲು ಸಾರಿಗೆಯು ಇತರ ಯಾವುದೇ ಸಾರಿಗೆ ಮಾಧ್ಯಮಕ್ಕಿಂತ ಉತ್ತಮವಾಗಿ ಸಂಘಟಿತವಾಗಿದೆ. ಇದು ನಿಗದಿತ ಮಾರ್ಗಗಳು ಮತ್ತು ವೇಳಾಪಟ್ಟಿಗಳನ್ನು ಹೊಂದಿದೆ. ಇತರ ಸಾರಿಗೆ ವಿಧಾನಗಳಿಗೆ ಹೋಲಿಸಿದರೆ ಇದರ ಸೇವೆಗಳು ಹೆಚ್ಚು ನಿಶ್ಚಿತ, ಈ ರೈಲು ನಿಲುಗಡೆ ಆಗುವುದರಿಂದ ಈ ಬಾಗದ ತಡವಲಗಾ, ಹೋರ್ತಿ, ನಿಂಬಾಳ, ಲಿಂಗದಹಳ್ಳಿ,ಚೋರಗಿ, ಚವಡಿಹಾಳ,ಬಬಲಾದಿ,ಹಳಗುಣಕ್ಕಿ, ಸೇರಿದಂತೆ ಅನೇಕ ಗ್ರಾಮದ ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಹುಬ್ಬಳ್ಳಿ ವಿಭಾಗ ಸಹಾಯಕ ಅಭಿಯಂತರಾದ ಚಂದನಕುಮಾರ ಜಿ, ವಿಜಯಪೂರ ವಿಭಾಗೀಯ ಮುಖ್ಯ ವಾಣಿಜ್ಯ ನಿರೀಕ್ಷಣಾ ಅಧಿಕಾರಿ ಎಂ ವಾಯ್ ಪಾಟೀಲ, ವಿ ಬಿ ಪುರೋಹಿತ, ನಿಂಬಾಳ ರೈಲು ನಿಲ್ದಾಣ ಮುಖ್ಯ ಪ್ರಬಂಧಕರಾದ ಶಂಕರ ದೇಸಾಯಿ, ಸುರಕ್ಷತಾ ಬಲ ಮುಖ್ಯಸ್ಥರಾದ ಸಂತೋಷ, ಹಾಗೂ ಹೋರ್ತಿ ಪೆÇೀಲಿಸ್ ಠಾಣೆ ಪಿಎ??? ಸೀತಾರಾಮ ಲಮಾಣಿ, ಮುಖಂಡರಾದ ಅಣ್ಣಪ್ಪಸಾಹುಕಾರ ಖೈನೂರ, ಶ್ರೀಮಂತ ಗಿಡಗಂಟಿ,ಅನೀಲ ಜಮಾದಾರ, ರವಿ ವಗ್ಗೆ, ಲಾಯಪ್ಪ ದೊಡ್ಡಮನಿ, ನಾಗುಗೌಡ ಪಾಟೀಲ, ಅಣ್ಣಪ್ಪ ರೂಗಿ, ಶಿವಪುತ್ರ ವಂದಾಲ, ಚಂದ್ರಕಾಂತ ಮರಡಿ, ಮೋಹನ್ ರಾಠೋಡ, ನಾಗರಾಜ ವಂದಾಲ,ಸೇರಿದಂತೆ ಅನೇಕರು ಮುಖಂಡರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಗಜಾಸುರ ಪುಟಾಣಿ ನಿರೂಪಿಸಿದರು.