ರಾಮದುರ್ಗ: ಕಟ್ಟಡ ಕಾಮಗಾರಿ ಕಳಪೆ- ಆರೋಪ

ಗಬ್ಬೂರು.ನ.೧೫-ದೇವದುರ್ಗ ತಾಲೂಕಿನ ರಾಮದುರ್ಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಳ್ಳತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಂದಾಜು ವೆಚ್ಚ ೧೧ಲಕ್ಷ ರೂ.ಗಳಲ್ಲಿ ಅಂಗನವಾಡಿ ನಿರ್ಮಿಸಲಾಗುತ್ತಿದೆ.ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್ ಅಳವಡಿಸಿದ್ದು, ಸರಿಯಾಗಿ ಕ್ಯೂರಿಂಗ್ ಆಗಿಲ್ಲ.
ಗೋಡೆ ನಿರ್ಮಾಣಕ್ಕಾಗಿ ಬುನಾದಿಗೆ ನೆಲ ಅಗೆಯಲಾಗಿತ್ತು, ಅದನ್ನು ಜಲ್ಲಿಕಲ್ಲು, ಅಥವಾ ಕಲ್ಲಿನಿಂದ ಮುಚ್ಚಿ ಗಟ್ಟಿಗೋಳಿಸಬೇಕಾಗಿತ್ತು.ತಳಮಟ್ಟದಲ್ಲಿ ಬೀಮ್ ಅಳವಡಿಸಿದ್ದರೆ ಬುನಾದಿ ಗಟ್ಟಿಯಾಗುತ್ತಿತ್ತು.ಆದರೆ ಬುನಾದಿಗಾಗಿ ಅಗೆದಿರುವ ಸ್ಥಳದಲ್ಲಿ ಮರಳು ಮತ್ತು ಮರಂ ನಿಂದ ಮುಚ್ಚಲಾಗಿದೆ.ಮಳೆ ಬಂದರೆ ಬುನಾದಿ ಭಾಗ ಕುಸಿಯುವ ಸಾಧ್ಯತೆ ಇದೆ.ಬುನಾದಿಯನ್ನು ಗಟ್ಟಿಗೋಳಿಸದೇ ಮೇಲ್ಭಾಗದಲ್ಲಿ ಕಟ್ಟಡ ನಿರ್ಮಿಸಿದ್ದಾರೆ ಅದು ಅಭದ್ರವಾಗಿದೆ, ಚಿಕ್ಕ ಚಿಕ್ಕ ಮಕ್ಕಳು ಇಲ್ಲಿಗೆ ಬರುವುದರಿಂದ ಕಾಮಗಾರಿ ಗುಣಮಟ್ಟದ ಬಗ್ಗೆ ಕಾಳಜಿವಹಿಸಬೇಕು.
ಎಸ್ಟಿಮೆಂಟ್ ಪ್ರಕಾರ ಕೆಲಸವಾಗಿಲ್ಲ, ಅಧ್ಯಕ್ಷ ಪತಿಯ ಜೊತೆ ದೇವದುರ್ಗ ತಾಲೂಕು ಪಂಚಾಯತಿ ಇಒ ಪಂಪಾಪತಿ ಹೀರೆಮಠ, ಹಾಗೂ ಎಡಿ ಬಸಣ್ಣ ನಾಯಕ,ಮತ್ತು ಹಿಂದಿನ ಪಿಡಿಓ ರೇಣುಕಾ, ಜೈಇ ಸುರೇಶ ವಾರದ್ ಶಾಮಿಲು ಆಗಿದ್ದಾರೆ ಕೂಡಲೇ ಇವರ ಮೇಲೆ ಸಂಬಂಧಿಸಿದ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಮುಖಂಡರಾದ ಸಂಗಮೇಶ ನಾಯಕ, ವಿಜಯಗೌಡ,ಹನುಮರೆಡ್ಡಿ, ನಾಗರಾಜ, ಅಕ್ಷಯ ಕುಮಾರ್ ದೂರಿದರು.