ರಾಮದುರ್ಗದಲ್ಲಿ ಶೇ. 8132 ಮತದಾನ

ರಾಮದುರ್ಗ,ಡಿ.28- ಭಾನುವಾರ ನಡೆದ ರಾಮದುರ್ಗ ತಾಲೂಕಿನ 33 ಗ್ರಾಮ ಪಂಚಾಯ್ತಿಗಳ ಚುನಾವಣೆಯಲ್ಲಿ ಶೇ. 81.32 ರಷ್ಟು ಮತದಾನವಾಗಿದೆ.
491 ಸ್ಥಾನಗಳ ಪೈಕಿ ಕದಾಂಪೂರದ 6ನೇ ವಾರ್ಡನಲ್ಲಿ ಮತಪತ್ರದಲ್ಲಿಯ ದೋಷದಿಂದ ಚುನಾವಣೆ ಮುಂದೂಡಲಾಗಿದೆ. ಇದನ್ನು ಹೊರತುಪಡಿಸದರೆ ತಾಲೂಕಿನಲ್ಲಿ ಸಣ್ಣ ಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಚುನಾವಣೆ ಶಾಂತಿಯುತವಾಗಿ ನಡೆಯಿತು.
156135 ಮತದಾರರ ಪೈಕಿ 61157 ಮಹಿಳೆಯರು ಮತ್ತು 66501 ಪುರುಷ ಮತದಾರರ ಒಟ್ಟು 127658 ಮತದಾರರು ಮತಚಲಾಯಿಸಿದ್ದಾರೆ.
ತಾಲೂಕಿನ ಬಟಕುರ್ಕಿಯಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಮತ್ತು ಶ್ರೀಧನಲಕ್ಷ್ಮಿ ಶುಗರ್ಸ್ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮತ್ತು ಜಿಪಂ ಮಾಜಿ ಸದಸ್ಯೆ ರತ್ನಾ ಯಾದವಾಡ ಮತ ಚಲಾಯಿಸಿದರು.