ರಾಮದಾಸ್ ಅಠವಲೆ ಪ್ರಮಾಣವಚನ : ಎ ಬಿ ಹೊಸಮನಿ ನೇತೃತ್ವದಲ್ಲಿ ಸಂಭ್ರಮಾಚರಣೆ

ಕಲಬುರಗಿ:ಜೂ.10: ರಿಪಬ್ಲಿಕನ್ ಪಾರ್ಟಿ ಆಫ್ ರಾಷ್ಟ್ರೀಯ ಅಧ್ಯಕ್ಷರಾದ ರಾಮದಾಸ್ ಅಠವಲೆ ಇವರು ನರೇಂದ್ರ ಮೋದಿ ಅವರ ಎನ್ ಡಿ ಎ ಸರಕಾರದ ಮಂತ್ರಿ ಮಂಡಲದಲ್ಲಿ ಸತತ ಮೂರನೇ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದರಿಂದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಎ ಬಿ ಹೊಸಮನಿ ನೇತೃತ್ವದಲ್ಲಿ ನಗರದ ಜಗತ್ ವೃತ್ತದ ಬಳಿ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕರ್ತರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಮೂರು ಬಾರಿ ಲೋಕಸಭೆ ಹಾಗೂ ಎರಡು ಬಾರಿ ರಾಜ್ಯ ಸಭಾ ಸದಸ್ಯರಾಗಿರುವ ಅನುಭವಿ ರಾಜಕಾರಣಿ ರಾಮ ದಾಸ್ ಅಠವಲೆ ಇವರನ್ನು ಗುರುತಿಸಿ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಿದ್ದಕ್ಕೆ ನರೇಂದ್ರ ಮೋದಿಯವರಿಗೆ ಎ ಬಿ ಹೊಸಮನಿ ಅವರು ಅಭಿನಂದನೆಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹುಸೇನ್ ಬಾಬಾ, ರಘುರಾಮ ಕಡೆಕರ್, ಮಹಾದೇವ್ ಅನವರಕರ್, ಅಮೃತ್ ಬಂಡೆ, ಮಹಾಂತೇಶ್ ಹೂವಿನಹಳ್ಳಿ, ಶಂಕರ್ ಕೊರವಿ, ಮಿಲಿಂದ್ ಕಣಮುಸ್,ಬಾಬುರಾವ್ ಎಸ್ ಕೆ, ರಾಜಕುಮಾರ್ ನಡಗೇರಿ, ಶಿವಕುಮಾರ್ ಮುಡ್ಡಿ, ಶ್ರೀಮಂತ ಮಾವಿನ್, ಶರಣು ವೈಜಾಪುರ್, ಚಂದ್ರಕಾಂತ್ ಬಿರೇದಾರ್, ಶ್ರೀಮಂತ ಶಿಲ್ಡ್, ರೇವಣಸಿದ್ದಪ್ಪ ಹುಳಿಪಲ್ಲೆ, ಸೂರ್ಯಕಾಂತ್ ಹಾಗರಗಿ, ಶಿವಪುತ್ರಪ್ಪ ಗೊಬ್ಬುರ್, ಸೂರ್ಯಕಾಂತ್ ನಾಯೇಂದ್ರಕರ್, ಸುಭಾಶ್ ಶೃಂಗೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.