“ರಾಮದಾನ್ಯ ಚರಿತೆ” ದುಡಿಯುವ ವರ್ಗದ ಪ್ರಣಾಳಿಕೆ : ಡಾ. ಕೆ. ವೆಂಕಟೇಶ್

ಕಲಬುರಗಿ:ನ.11:ಭಕ್ತಿ ಪಂಥದ ಚಳುವಳಿಯಲ್ಲಿ ಕನಕದಾಸರೊಬ್ಬರೇ ಶೂದ್ರ ಸಮುದಾಯಕ್ಕೆ ಸೇರಿದವರಿದ್ದರು. ಜಾತಿ ವ್ಯವಸ್ಥೆಯನ್ನು ಸರಿಪಡಿಸಲು ಒಂಟಿಯಾಗಿ ಪ್ರವಾಹದ ಎದುರು ಈಜಿದರು. “ರಾಮದಾನ್ಯ ಚರಿತೆ ದುಡಿಯುವ ವರ್ಗದ ಪ್ರಣಾಳಿಕೆ.” ಅಂದು ರಾಗಿ ಅಕ್ಕಿಯ ಸಂಘರ್ಷದ ಮೂಲಕ ತಮ್ಮ ಅಕ್ರೋಶವನ್ನು ಹೊರಹಾಕಿದರೆಂದು ಕನಕದಾಸರ ಜಯಂತಿ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಕೆ. ವೆಂಕಟೇಶ್. ಪ್ರಾಚಾರ್ಯರು, ಹಗರಿಬೊಮ್ಮನಹಳ್ಳಿ ತಮ್ಮ ಮುಖ್ಯ ಅತಿಥಿ ಉಪನ್ಯಾಸದಲ್ಲಿ ತಿಳಿಸಿದರು.

ವಿಶ್ವವಿದ್ಯಾಲಯದಂತಹ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ದಾರ್ಶನಿಕರ ಸಂದೇಶಗಳು ತಿಳಿಸಿಕೊಡುವುದು ತುಂಬಾ ಅವಶ್ಯವಿದೆ ಯೆಂದು ಪ್ರಾಸ್ತಾವಿಕ ನುಡಿಯಲ್ಲಿ ಶ್ರೀ ಕನಕ ಜಯಂತ್ಯುತ್ಸವ ಸಮಿತಿಯ ಸಂಚಾಲಕ ಡಾ. ಖೇಮಣ್ಣ ಅಲ್ದಿ ತಿಳಿಸಿದರು.

ಹದಿನಾರನೆಯ ಶತಮಾನದಲ್ಲಿ ಹೇಳಿರುವ ಕನಕದಾಸರ ಸಂದೇಶಗಳು ಇವತ್ತಿಗೂ ಸಹ ಪ್ರಸ್ತುತವಾಗಿವೆ. ದಾರ್ಶನಿಕರ ಸಂದೇಶಗಳು ವರ್ಷಕ್ಕೊಮ್ಮೆ ಮಾತ್ರ ಓದಿದರೆ ಸಾಲದು ಸದಾ ಅವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಪ್ರೊ. ದಯಾನಂದ ಅಗಸರ, ಕುಲಪತಿಗಳು ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಇವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ವಿವರಿಸಿದರು.

ಶ್ರೀ ಕನಕದಾಸರ ಭಾವಚಿತ್ರಕ್ಕೆ ಗೌರವ ಸಲ್ಲಿಸುವುದರ ಮೂಲಕ ಜಯಂತ್ಯುತ್ಸವ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಇದೇ ಸಂದರ್ಭದಲ್ಲಿ ಡಾ. ಲಕ್ಷ್ಮೀಶಂಕರ ಜ್ಯೊಶಿ ಮತ್ತು ಸಿಬ್ಬಂದಿಗಳ ನಾಡಗೀತೆ ಮತ್ತು ಕನಕದಾಸರ ಕೀರ್ತನೆಗಳನ್ನು ಸಂಗೀತದ ಮೂಲಕ ಪ್ರಸ್ತುತಪಡಿಸಲಾಯಿತು.

ಡಾ. ಬಿ. ಶರಣಪ್ಪ, ಕುಲಸಚಿವರು, ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಿಗಿ ಇವರು ಕನಕದಾಸರ ಕೆಲವು ಸಂದೇಶಗಳು ತಿಳಿಸುತ್ತ ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವರು ಮೌಲ್ಯಮಾಪನ ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ವಿಶ್ವವಿದ್ಯಾಲಯ ಗ್ರಂಥಪಾಲಕ ಮತ್ತು ವಿದ್ಯಾ ವಿಷಯಕ್ ಪರಿಷತ್ ಸದಸ್ಯರಾದ ಡಾ. ಸುರೇಶ ಜಂಗೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರೊ. ಬಸವರಾಜ ಸಣ್ಣಕ್ಕಿ ವಿಶೇಶಾಧಿಕಾರಿಗಳು, ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವರು ಅತಿಥಿಗಳ ಪರಿಚಯ ಮಾಡಿಕೊಟ್ಟರು.

ಡಾ. ನಿಂಗಣ್ಣ ಕಣ್ಣೂರು, ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ, ಇವರು ವಂದಿಸಿದರು ಶ್ರೀ ಪ್ರಕಾಶ ಹದನೂರಕರ್ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ನಿಕಾಯದ ಡೀನರು, ಅಧ್ಯಾಪಕ ವೃಂದ, ಶಿಕ್ಷಕೇತರ ನೌಕರರು, ಕಲಬುರಗಿ ನಗರದ ಗಣ್ಯರು, ಸಂಶೋಧಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.