ರಾಮಣ್ಣ ಹವಳೆ ಶ್ರೇಷ್ಠ ಶಿಕ್ಷಣ ತಜ್ಞರು – ಸುಖಾಣಿ

ರಾಯಚೂರು.ನ.೧೯ – ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀ ರಾಮಣ್ಣ ಹವಳೆಯವರು ಉತ್ತಮ ಶಿಕ್ಷಕರು, ಅವರು ತಮ್ಮ ವಿದ್ಯಾರ್ಥಿಗಳ ಮೇಲೆ ತೋರಿದ ಪ್ರೀತಿ ಅನನ್ಯವಾದದ್ದು.ಅವರಿಗೆ ವೃತ್ತಿಯ ಮೇಲೆ ಅನನ್ಯ ಭಕ್ತಿ, ಶ್ರದ್ಧೆ ಇತ್ತು.ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಲ್ಲದೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಿದಾರೆ. ಅಲ್ಲದೆ ಅವರು ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದಾರೆ. ಇಂದು ಜ್ಞಾನ
ಪಂಚಮಿಯ ದಿನವಾಗಿದ್ದು ಈ ದಿನ ಸರಸ್ವತಿ ಪುತ್ರರಾದ ಇವರನ್ನು ಸನ್ಮಾನಿಸುತ್ತಿರುವುದು ಯೋಗಾಯೋಗವಾಗಿದೆ ಎಂದು ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ ಹೇಳಿದರು.
ಎಸ್.ಎಸ್.ಅರ್.ಜಿ. ಮಹಿಳಾ ಮಹಾವಿದ್ಯಾಯದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯವತಿಯಿಂದ ಸನ್ಮಾನಿಸಿ ಮಾತನಾಡಿದರು.
ಹಿರಿಯ ಸಾಹಿತಿಗಳಾದ ವೀರಹನುಮಾನ್ ಇವರು ಶ್ರೀ ರಾಮಣ್ಣ ಹವಳೆಯವರ ಕುರಿತು ಅಭಿನಂದನಾ ನುಡಿಗಳನ್ನಾಡಿದರು,ರಾಮಣ್ಣ ಹವಳೆಯವರು ಹಿಂದುಳಿದ ಗ್ರಾಮದಲ್ಲಿ ಜನಿಸಿ,ಕಷ್ಟಪಟ್ಟು ಓದಿ ಶಿಕ್ಷಕರಾಗಿ, ಸಾಹಿತಿಗಳಾಗಿ, ಸಂಶೋಧಕರಾಗಿ, ವಿಮರ್ಶಕರಾಗಿ, ಸಮಾಜ ಸುಧಾರಕರಾಗಿ, ಪಠ್ಯ ಪುಸ್ತಕ ರಚನೆಯ ರೂವರಿಯಾಗಿ, ವಿವಿಧ ಸಾಹಿತ್ಯಕ ಸಂಘಟನೆಗಳಲ್ಲಿ ಭಾಗವಹಿಸಿ ಮಾರ್ಗದರ್ಶಕರಾಗಿ ಜಿಲ್ಲೆಯ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಇವರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಜಿಲ್ಲೆಯ ಮತ್ತು ನಮ್ಮೆಲ್ಲರ ಹೆಮ್ಮೆಯಾಗಿದೆ. ಒಬ್ಬ ಅರಸ ತನ್ನ ಕ್ಷೇತ್ರದಲ್ಲಿ ಮಾತ್ರ ಗೌರವಿಸಲ್ಪಟ್ಟರೆ ಶಿಕ್ಷಕನು ಎಲ್ಲಾ ಕಡೆ ಗೌರವಿಸಲ್ಪಡುತ್ತಾನೆ. ಶಿಕ್ಷಕ ಪಾಠ ಮಾಡುವದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ಎನ್ನುವ ಮಾತು ಇವರಿಗೆ ಅನ್ವರ್ಥಕವಾಗುತ್ತದೆ ಎಂದು ತಿಳಿಸಿದರು.
ರಾಮಣ್ಣ ಹವಳೆಯವರನ್ನು ಶ್ರೀ ಪಾರಸಮಲ್ ಸುಖಾಣಿ ಅಧ್ಯಕ್ಷರು, ತಾರಾನಾಥ ಶಿಕ್ಷಣ ಸಂಸ್ಥೆ ಇವರು ಸನ್ಮಾನಿಸಿದರು. ಅಭಿನಂದನಾ ಸನ್ಮಾನ ಸ್ವೀಕರಿಸಿ ರಾಮಣ್ಣ ಹವಳೆಯವರು ತಮ್ಮ ಜೀವನದ ಸಾಧನೆಯ ಕುರಿತು ಮಾತನಾಡಿದರು. ಎಲ್.ವಿ.ಡಿ.ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ವಿಚಾರಗಳನ್ನು ಹಾಗೂ ಗುರುಗಳನ್ನು ಭಕ್ತಿಯಿಂದ, ಭಾವುಕತೆಯಿಂದ ಸ್ಮರಿಸಿಕೊಂಡರು. ತಮ್ಮ ಮತ್ತು ತಾರಾನಾಥ ಶಿಕ್ಷಣ ಸಂಸ್ಥೆಯ ಸಂಬಂಧವನ್ನು ವಿವರಿಸಿದರು.
ಆ ಕಾಲದಲ್ಲಿ ಇನಸ್ಪೆಕ್ಟರಾಗಿ ಸೇಯಲ್ಲಿದ್ದೆ ಅದನ್ನು ಬಿಟ್ಟು ಕಡಿಮೆ ವೇತನದ ಶಿಕ್ಷಕ ವೃತ್ತಿಗೆ ಬಂದೆ ಏಕೆಂದರೆ ಶಿಕ್ಷಕ ವೃತ್ತಿ ಶ್ರೇಷ್ಠವಾದುದ್ದು. ನನಗೆ ಶಿಕ್ಷಣದ ಸೇವೆಯ ಕಾರಣಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷದ ವಿಷಯವಾಗಿರುತ್ತದೆ. ನನ್ನ ಮೊದಲ ಕೃತಿಗೆ ಗುಲಬರ್ಗಾ ವಿಶ್ವ ವಿದ್ಯಾಲಯದ ಪ್ರಶಸ್ತಿ ಬಂದಿತು ಎಂದು ಸ್ಮರಿಸಿಕೊಂಡರು. ಕಾರ್ಯಕ್ರಮವು ಕುಮಾರಿ ಸಹನಾ ಅವರ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭವಾಯಿತು, ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಭಾರಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಂಬಪತಿ ಪಾಟೀಲ ವಕೀಲರು ಅಥಿತಿಗಳನ್ನು ಸ್ವಾಗತಿಸಿದರು.ರಾಮಾಂಜಿನೇಯ, ಪವನಕುಮಾರ ಸುಖಾಣ, ಶ್ರೀಕಾಂತ ವಕೀಲರು, ಜಿ.ಸುರೇಶ ಇವರು ಅಥಿತಿಗಳಿಗೆ ಪುಷ್ಪ ಸಮರ್ಪಿಸಿದರು.
ವೇದಿಕೆಯ ಮೇಲೆ ಪಾರಸಮಲ್ ಸುಖಾಣಿ ಅಧ್ಯಕ್ಷರು, ತಾರಾನಾಥ ಶಿಕ್ಷಣ ಸಂಸ್ಥೆ, ನಂದಾಪೂರ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿಗಳು, ತಾರಾನಾಥ ಶಿಕ್ಷಣ ಸಂಸ್ಥೆ ,ಅಂಬಾಪತಿ ಪಾಟೀಲ ವಕೀಲರು ಪ್ರಭಾರಿ ಪ್ರಧಾನ ಕಾರ್ಯದರ್ಶಿಗಳು, ತಾರಾನಾಥ ಶಿಕ್ಷಣ ಸಂಸ್ಥೆ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯ ಖಜಾಂಚಿಗಳಾದ ಶ್ರೀ ಪುರಷೋತ್ತಮ್ ಇನಾನಿ, ತಾರಾನಾಥ ಶಿಕ್ಷಣ ಸಂಸ್ಥೆಯ ಸರ್ವಸದಸ್ಯರು, ಆಡಳಿತಾಧಿಕಾರಿಗಳಾದ ಶ್ರೀ ಬಿ. ದೇವರಡ್ಡಿಯವರು ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯ ಅಧ್ಯಕರು, ಕಾರ್ಯದರ್ಶಿಗಳು, ಸದಸ್ಯರು, ಪ್ರಾಚಾರ್ಯರು, ಉಪಪ್ರಾರ್ಚಾಯರು, ಮುಖ್ಯೋಪದ್ಯಾಯರು, ಬೋಧಕ, ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶರಣಪ್ಪ ಸಿ, ನಿವೃತ್ತ ಪ್ರಾಚಾರ್ಯರು, ಲಿಂಗಸ್ಗೂರ, ಮಹಾಂತೇಶ ಮಸ್ಕಿ, ಮಾಜಿ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ, ರಾಯಚೂರು, ಶ್ರೀರಂಗಣ್ಣ ಪಾಟೀಲ್ ಅಳ್ಳುಂಡಿ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ರಾಯಚೂರು, ಇವರು ರಾಮಣ್ಣ ಹವಳೆಯವರನ್ನು ಸನ್ಮಾನಿಸಿದರು. ಜಟ್ರಂ ಶ್ರೀನಿವಾಸ, ಕಾರ್ಯದರ್ಶಿಗಳು ಎಲ್.ವಿ.ಡಿ.ಮಹಾವಿದ್ಯಾಲಯ ಇವರು ವಂದನಾರ್ಪಣೆ ಮಾಡಿದರು.