ರಾಮಕೃಷ್ಣ ವಿವೇಕಾನಂದ  ಕೇಂದ್ರದಲ್ಲಿ ಚಾತುರ್ಮಾಸ ಉಪನ್ಯಾಸ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.19: ಯಾದೇವಿ ಸರ್ವ ಭೂತೇಶು ಶಕ್ತಿ ರೂಪೇಣ ಸಂಸ್ಥಿತಾ ಹಾಗೇ ಮಾತೃ, ಭ್ರಾಂತಿ, ಲಜ್ಜಾ, ಕ್ಷುದಾ ಮುಂತಾದ ಅನೇಕ ರೂಪಗಳಲ್ಲಿ ಭಾರತೀಯರು ದೇವರನ್ನು ದೇವಿಯ ಸ್ವರೂಪವಾಗಿ ಪರಬ್ರಹ್ಮನೆಂದು ಆರಾಧಿಸಿದ್ದಾರೆ ಎಂದು ಗದಗಿನ ವಿವೇಕಾನಂದ ಕೇಂದ್ರದ ಅಧ್ಯಕ್ಷರಾದ ನಿರ್ಭಯಾನಂದ ಸ್ವಾಮಿಜಿಯವರು ಅಭಿಪ್ರಾಯಪಟ್ಟರು.
ನಗರದ ರಾಮಕೃಷ್ಣ ವಿವೇಕಾನಂದ  ಕೇಂದ್ರದಲ್ಲಿ ಚಾತುರ್ಮಾಸ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ,  ಜಗನ್ಮಾತೆಯು ಸಕಲ ರೂಪದಲ್ಲಿ ಇಚ್ಚಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಶ್ರೀಕೃಷ್ಣನು ಜಗತ್ತು ಯಾವಾಗ ಗ್ಲಾನಿಯಾಗಿರುತ್ತದೊ ಆಗ ತಾನು ಅವತಾರ ತಾಳುತ್ತಾನೆ ಎನ್ನುವಂತೆ 1836 ರಲ್ಲಿ ರಾಮಕೃಷ್ಣ ಪರಮಹಂಸರು ಜನಿಸಿದರು. ಸ್ರ್ತೀ ಗೆ ಮಹತ್ವ ಹಾಗೂ ದೈವೀ ಸ್ವರೂಪವನ್ನು ನೀಡಬೇಕೆಂಬುದನ್ನು ಬದುಕಿ ತೋರಿಸಿದ್ದಾರೆ. ಶಾರದಾಮಾತೆಯವರು 33 ವರ್ಷಗಳ ಕಾಲ ತಾಯಿಯಾಗಿಯು 33 ವರ್ಷಗಳ ಕಾಲ ಗುರುವಾಗಿಯೂ ಬದುಕಿ ತೋರಿಸಿದರು. ಶಕ್ತಿಯೇ ಜಡಕ್ಕೆ ಜೀವತುಂಬಿ ಶಿವನಾಗಿಸುತ್ತದೆ ಎಂದು ಪ್ರತಿಪಾದಿಸಿದರು. ಇನ್ನು ಇವರ ಶಿಷ್ಯ ವಿವೇಕಾನಂದರು ಎಲ್ಲಾ ದೇಶಗಳಲ್ಲಿ ಪ್ರಭಾವಬೀರಿ ಅವರ ಕಣ್ಣುಗಳಿಗೆ ಬೆರಗಾಗಿ ನಕ್ಷತ್ರಗಳ ಹೊಳಪು ಕೂಡ ಇವರ ಮುಂದೆ ಮಂಕಾಗಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.  ಮನುಷ್ಯನ ಬದುಕಿಗೆ ತಾಯಿಯೆ ಮುಖ್ಯ ಕಾರಣಳು. ಧರ್ಮರಾಜನಿಗೆ ಕುಂತಿ ಹೇಗೋ ದುರ್ಯೋದನನಿಗೆ ಗಾಂಧಾರಿಯವರುಗಳು ಅವರ ದುರಂತ ಹಾಗೂ ಯಶಸ್ಸುಗಳಿಗೆ ಕಾರಣರಾಗುತ್ತಾರೆ ಎಂದು ಪ್ರತಿಪಾದಿಸಿದರು. 
ಈ ಕಾರ್ಯಕ್ರಮಕ್ಕೆ ಶ್ರೀಗಳನ್ನು ಪರಿಚಯಿಸಿದ ಹರಿಹರ ಕೇಂದ್ರದ ಅಧ್ಷಕ್ಷರಾದ ಶಾರದೇಶಾನಂದ ಸ್ವಾಮಿಜಿಯವರು ವಿವೇಕಾನಂದರು ಚಿಕಾಗೋದಲ್ಲಿ ನೀಡಿದ ಭಾಷಣದಂತೆ ನಾಲ್ಕನೆಯ  ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿದಿಸಿ ಭಾಷಣ ಮಾಡಿದ್ದಾರೆ ಎಂದರು. ಕೇಂದ್ರದ ಕಾರ್ಯದರ್ಶಿಗಳಾದ ಜಗನ್ನಾಥರವರು ವಂದನಾರ್ಪಣೆಯನ್ನು, ಅಧ್ಯಕ್ಷರಾದ ಶ್ರೀಧರ್ ರವರು ಶ್ರೀಗಳಿಗೆ ಸನ್ಮಾನಿಸಿದರು ಎಂದು ಶ್ರೀ ತಿಪ್ಪೇರುದ್ರ ಟ್ರಸ್ಟ್ ನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

One attachment • Scanned by Gmail

ReplyForward