ರಾಮಕೃಷ್ಣ-ವಿವೇಕಾನಂದ ಆಶ್ರಮ ಗೋಶಾಲೆಗೆ ಸಚಿವ ಪ್ರಭು ಚವ್ಹಾಣ ಭೇಟಿ

ಬೀದರ:ಜು.22:ಪಶು ಸಂಗೋಪನೆ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ಜುಲೈ 21ರಂದು ಬೀದರ್‍ನ ಶಿವನಗರದಲ್ಲಿರುವ ರಾಮಕೃಷ್ಣ- ವಿವೇಕಾನಂದ ಆಶ್ರಮ ಗೋಶಾಲೆಗೆ ಭೇಟಿ ನೀಡಿ, ಗೋವುಗಳೊಂದಿಗೆ ಸಮಯ ಕಳೆದರು.
ಗೋಪೂಜೆ ಸಲ್ಲಿಸಿ, ಹಸುಗಳಿಗೆ ಆಹಾರವನ್ನು ಉಣಿಸುವ ಮೂಲಕ ಸಂತಸಪಟ್ಟರು. ಇದೇ ವೇಳೆ ರಾಮಕೃಷ್ಣ ಆಶ್ರಮದ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮೀಜಿಯವರು ಗೋಶಾಲೆಯಲ್ಲಿ ಗೋವುಗಳ ಪಾಲನೆ-ಪೋಷಣೆ, ಗೋಶಾಲೆಯ ನಿರ್ವಹಣೆಯ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಗೋಶಾಲೆಯಲ್ಲಿ ದೇಶಿ ಹಸುಗಳ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಸುಮಾರು 200 ಹಸುಗಳನ್ನು ಪೋಷಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ಧಾರ್ಮಿಕ ಕೆಲಸಗಳ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವುದು ಮತ್ತು ಗೋಶಾಲೆಯನ್ನು ತೆರೆದು ಮಾದರಿ ರೂಪದಲ್ಲಿ ನಿರ್ವಹಣೆ ಮಾಡುತ್ತಿರುವ ಪೂಜ್ಯರ ಕೆಲಸಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಗೋಶಾಲೆಯಲ್ಲಿರುವ ದೇಶಿ ತಳಿಯ ಗೋವುಗಳನ್ನು ಕಂಡು ಸಂತಸಪಟ್ಟರು.
ಗೋವುಗಳನ್ನು ದತ್ತು ಪಡೆದು ಪೋಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಜಾರಿಗೆ ತಂದಿರುವ ಪುಣ್ಯಕೋಟಿ ದತ್ತು ಯೋಜನೆ, ಗೋವುಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಯೋಜನೆಗಳ ಕುರಿತು ಪೂಜ್ಯರೊಂದಿಗೆ ಸುದೀರ್ಘ ಚರ್ಚಿಸಿದರು. ಇದೇ ವೇಳೆ ಪೂಜ್ಯ ಜೋತಿರ್ಮಯಾನಂದ ಸ್ವಾಮೀಜಿಯವರು ಸಚಿವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಪಾಟೀಲ ಗಾದಗಿ, ಔರಾದ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಪ್ರತೀಕ ಚವ್ಹಾಣ, ಸುರೇಶ ಭೋಸ್ಲೆ, ಸಚಿನ್ ರಾಠೋಡ, ವೀರೂ ರಾಜಾಪೂರೆ, ಗುರುನಾಥ ರಾಜಗೀರಾ, ಖಂಡೋಬಾ ಕಂಗಟೆ ಹಾಗೂ ಇತರರು ಉಪಸ್ಥಿತರಿದ್ದರು