ರಾಮಕಿರಣ ವರ್ಗವಣೆ ಗ್ರಾಮಸ್ಥರಿಂದ ಸನ್ಮಾನ

ಅರಕೇರಾ,ಜು.೧೨-
ಪಟ್ಟಣದಲ್ಲಿನ ಎಸ್‌ಬಿಐ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯವಸ್ಥಾಪಕರಾದ ವೈ,ರಾಮಕಿರಣ ಇವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದ ಪ್ರಯುಕ್ತ ಇಲ್ಲಿನ ಗ್ರಾಮಸ್ಥರು,ಗ್ರಾಹಕರು ಮುಖಂಡರು ಮತ್ತು ಬ್ಯಾಂಕಿನ ಸಿಬ್ಬಂದಿಗಳು ಸೇರಿಕೊಂಡು ಸನ್ಮಾನ ಬೀಳ್ಕೋಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಡಾ. ಎಚ್ ಎ ನಾಡಗೌಡ ಮಾತನಾಡಿ ನೊಂದವರಿಗೆ ಆರ್ಥಿಕ ನೆರವು ಕಲ್ಪಿಸುತ್ತಿರುವ ಎಸ್ ಬಿ ಐ ಬ್ಯಾಂಕ್ ಸೇವೆ ಕಾರ್ಯ ಶ್ಲಾಘನೀಯಾ ಬ್ಯಾಂಕ್ ಜನರ ಅಚ್ಚುಮೆಚ್ಚಾಗಿದ್ದು ಇಲ್ಲಿನ ಆಡಳಿತ ಸೇವೆ ಉತ್ತಮವಾಗಿದ್ದು. ಸದರಿ ಬ್ಯಾಂಕಿನ ವ್ಯವಸ್ಥಾಪಕರು ಬೇರೆಕಡೆ ವರ್ಗಾವಣೆಗೊಂಡಿರುವದರಿಂದ ವ್ಯವಸ್ಥಾಪಕರು ಗ್ರಾಹಕರು ಉತ್ತಮ ಬ್ಯಾಂದವ್ಯ ಹೊಂದಿದ್ದರು.ನಮ್ಮ ಗ್ರಾಮದಲ್ಲಿ ಯಾವುದೇ ಸರಕಾರಿ ಸೇವೆ ಸಲ್ಲಿಸುತ್ತಿರುವವರಿಗೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿ ಅವರಿಗೆ ಗೌರವನೀಡುವಂತ ಕೆಲಸಮಾಡುತ್ತಾಬಂದಿದ್ದೇವೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕ ವೈರಾಮಕಿರರಣ ಬ್ಯಾಂಕಿನ ಆದೇಶದಂತೆ ತಾವು ಮತ್ತೊಂದು ಕಡೆ ಹೋಗುವದು ಅನಿವಾರ್ಯ ಇರುವಷ್ಟು ದಿನ ಈ ಬ್ಯಾಂಕಿನ ಗ್ರಾಹಕರ ಜೊತೆಗೆ ಉತ್ತಮ ಸಂಬಂದ ಇಟ್ಟುಕೊಂಡು ಕೆಲಸಮಾಡಿದ್ದು ತಮಗೆ ಸಂತೋಷವಾಗಿದೆ. ಈಬ್ಯಾಂಕಿಗೆ ಬರುವ ಗ್ರಾಹಕರು ಸಹ ಉತ್ತಮವಾದ ವ್ಯವಹಾರ ಮಾಡುವುದರ ಜತೆಗೆ ಬ್ಯಾಂಕಿನೊಂದಿಗೆ ಉತ್ತಮ ಸ್ನೇಹ ಸಂಬಂದ ಇಟ್ಟುಕೊಂಡಿದ್ದಾರೆ.ಬ್ಯಾಮಕಿಗೆ ಬರುವ ಗ್ರಾಹಕರೊಂದಿಗೆ ಸಮಸ್ಯೆಗಳನ್ನು ಆಳಿಸಿ ಬ್ಯಾಮಕಿಗೆ ಸಂಬಂಧಪಟ್ಟ ವ್ಯವಹಾರವನ್ನು ನಿಯಮಾನುಸಾರ ಕ್ರಮಬದ್ದವಾಗಿ
ಮಾಡುವುದg ಜತೆಗೆ ಸಲಹೆ ಸೂಚನೆಯನ್ನು ನೀಡಿ ಅವರೊಂದಿಗೆ ವ್ಯವಹಾರ ಮಾಡಿದರೆ ಅವರೂ ಸಹ ವ್ಯವಹಾರ ನಮ್ಮನ್ನೂ ಉತ್ತಮ ರೀತಿಯಲ್ಲಿಕಾಣುತ್ತಾರೆಂದು ಹೇಳಿದರು.
ಗ್ರಾಮಸ್ಥರು ಗ್ರಾಹಕರು, ಬ್ಯಾಂಕಿನ ಸಿಬ್ಬಂದಿವರ್ಗದವರು ಸನ್ಮಾನಿಸಿ ನೆನೆಪಿನಕಾಣಿಕೆ ನೀಡಿ ಗೌರವಿಸಿದರು.
ಸಂದರ್ಭದಲ್ಲಿ ರಾಘವೇಂದ್ರವಡಿಗೇರಾ, ಸುರೇಶಸಾಹುಕಾರ ಗುಡಿ, ಶರಣಬಸವನಾಗೋಲಿ, ಯಮನಪ್ಪಕುಂಬಾರ, ಅಬ್ದುಲ್ ಮಾಜೀದ್, ಮಹ್ಮದ ಇದ್ರೀಸ್, ಬೂದೇಪ್ಪ ಬಂಡೆಗುಡ್ಡ,ರಾಜಮಹ್ಮದ, ಅಮರಕುರುಕುಂದಿ ಬ್ಯಾಂಕಿನ ಸಿಬಂದಿವರ್ಗದವರಾದ ಪ್ರೀತಿಕುಮಾರ, ತೇಜಸ್ಸು, ವೀರುಪಾಕ್ಷಯ್ಯಸ್ವಾಮಿ, ವೀರುಪಾಕ್ಷಿ ಕುಂಬಾರ, ವೀರಣ್ಣಜಾಲಹಳ್ಳಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.