
ನವದೆಹಲಿ,ಮಾ.೬- ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಸಿಬಿಐ ಪ್ರಶ್ನಿಸಿದ ಕ್ರಮವನ್ನು ಕಾಂಗ್ರೆಸ್‌ನ ಮಾಜಿ ನಾಯಕ ಕಪಿಲ್ ಸಿಬಲ್ ಪ್ರಶ್ನಿಸಿದ್ದು ಇದು ರಾಜಕೀಯ ಅನ್ಯಾಯಕ್ಕೆ ತಾಜಾ ಉದಾಹರಣೆ ಎಂದು ಕಿಡಿ ಕಾರಿದ್ದಾರೆ.
ರಾಬ್ರಿ ದೇವಿ ಅವರನ್ನು ಸಿಬಿಐ ಪ್ರಶ್ನಿಸಿದ ಬಗ್ಗೆ ಪ್ರತಿಕ್ರಿಯಿಸಿ ಕಪಿ ಸಿಬಲ್, “ಅವರಿಗೆ ಏನು ಸಿಗುತ್ತದೆ. ನಿಮಗೆ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯದ ಸ್ಥಿತಿ ತಿಳಿದಿದೆ, ಅವರು ಮೂತ್ರಪಿಂಡ ಕಸಿ ಮಾಡಿಸಿಕೊಂಡ ರೋಗಿ, ಅವರು ಭಾಷಣ ಮಾಡಲು ಅಥವಾ ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಹೀಗಿದ್ದರೂ ಅವರ ಮೇಲೆ ಸಿಬಿಐ ದಾಳಿ ಖಂಡನಾರ್ಹ ಎಂದಿದ್ಧಾರೆ
ದೇಶದಲ್ಲಿ ಎದುರಾಳಿ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕೇಂದ್ರ ಸರ್ಕಾರದ ಕ್ರಮ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರ ಮೇಲೆ ಸಿಬಿಐ ದಾಳಿ ಮಾಡುವುದನ್ನು ಖಂಡಿಸಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ತೇಜಸ್ವಿ ಯಾದವ್ ಮತ್ತು ಮಾಜಿ ಎನ್‌ಡಿಎ ಮಿತ್ರ ಶಿರೋಮಣಿ ಅಕಾಲಿದಳದ ಕಾರ್ಯವನ್ನು ಶ್ಲಾಘಿಸಿದ್ದಾರೆ.
ನ್ಯಾಯಕ್ಕಾಗಿ ವೇದಿಕೆ:
೨೦೨೪ ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಲು ಹೊಸ ವೇದಿಕೆ “ಇನ್ಸಾಫ್ ಕಿ ಸಿಪಾಹಿ (ನ್ಯಾಯಕ್ಕಾಗಿ ವೇದಿಕೆ)” ಜೊತೆಗೆ ವಿರೋಧ ಪಕ್ಷಗಳು ಜೊತೆಗೂಡಬೇಕು.ಇದನ್ನು ಸ್ವತಃ ಪ್ರಧಾನಿ ಕೂಡ ವಿರೋಧಿಸಲಾರರು ಎಂದು ಕಪಿಲ್ ಸಿಬಲ್ ಹೇಳಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಯಕ್ಕಾಗಿ ವೇದಿಕೆ ಸೇರಿದರೆ ಸ್ವಾಗತ ಮಾಡುವುದಾಗಿ ಹೇಳಿದ ಅವರು ಇದು ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ವೇದಿಕೆ. ಜೊತೆಗೆ ನ್ಯಾಯವನ್ನು ಬೆಂಬಲಿಸುತ್ತದೆ ಎಂದಿದ್ಧಾರೆ.
ಈ ವೇದಿಕೆಯು ನ್ಯಾಯ “ಸಾಮಾಜಿಕ, ಆರ್ಥಿಕತೆಗಾಗಿ ನಿಂತಿದೆ” ಎಂದು ಹೇಳಿದ ಅವರು ರಾಜಕೀಯ” ಎಂದು ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ ಭರವಸೆ ನೀಡಿದ್ದಾರೆ.