ರಾಬರ್ಟ್ ಚಿತ್ರ ೧೦೦ ಕೋಟಿ ರೂ. ಗಳಿಕೆ


ಬೆಂಗಳೂರು,ಏ.೧- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್” ಚಿತ್ರ ೧೦೦ ಕೋಟಿ ರೂಪಾಯಿ ಸಂಗ್ರಹ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆದಿದೆ
ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಹೆಸರು ಪಡೆದಿರುವ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ೧೦೦ ಕೋಟಿ ರೂಪಾಯಿ ಸಂಗ್ರಹಮಾಡಿ ಹೊಸ ದಾಖಲೆ ಬರೆದಿದೆ
ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ‘ರಾಬರ್ಟ್’ ಸಿನಿಮಾ ಮೊದಲ ದಿನವೇ ೧೭.೨೪ ಕೋಟಿ ರೂ. ಕಲೆಕ್ಷನ್ ಮಾಡಿತ್ತು.
‘ರಾಬರ್ಟ್’ ೧೦೦ ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಇದಾಗಿದೆ ಎಂದು ಸ್ವತಃ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ರಕಟಿಸಿದ್ದಾರೆ.
೨೦೧೮ರಲ್ಲಿ ತೆರೆಕಂಡ ‘ಕೆಜಿಎಫ್’ ಸಿನಿಮಾ ಕೇವಲ ೭ ದಿನಕ್ಕೆ ೧೦೦ ಕೋಟಿ ರೂ. ಗಳಿಸಿತ್ತು. ಕೆಜಿಎಫ್ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಿಗೂ ಡಬ್ ಆಗಿದ್ದರಿಂದ ಅಷ್ಟು ಪ್ರಮಾಣದ ಕಲೆಕ್ಷನ್ ಮಾಡಿತ್ತು.ಆದರೆ ರಾಬರ್ಟ್ ಕನ್ನಡದಲ್ಲೇ ೧೦೦ ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಕೊರೊನಾ ಸೋಂಕಿನಿಂದ ಚಿತ್ರಮಂದಿರ ಬಾಗಿಲು ಮಾಡಿದ ಹಿನ್ನೆಲೆಯಲ್ಲಿ ಚಿತ್ರರಂಗದ ಮುಂದಿನ ಪರಿಸ್ಥಿತಿ ಏನು ಎನ್ನುವ ಆತಂಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಎಲ್ಲರಿಗೂ ಕಾಣಿಸಿಕೊಂಡಿತ್ತು.
ಪೊಗರು ರಾಬರ್ಟ್ ಇದೀಗ ಯುವರತ್ನ ಚಿತ್ರಗಳು ತೆರೆಗೆ ಬರುವ ಮೂಲಕ ಕನ್ನಡ ಚಿತ್ರರಂಗ ಸಹಜ ಸ್ಥಿತಿಯತ್ತ ಮರಳುತ್ತಿದೆ.