ರಾಬರಿಗೈದು ಪರಾರಿಯಾಗಿದ್ದ ಮೂವರು ಆರೋಪಿಗಳ ಬಂಧನ

ವಿಜಯಪುರ, ಜು.29:ರಾಬರಿಗೈದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೆÇಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.ರಂಜಿತ್ ಕಾಳೆ, ವಿಠಲ್ ಘೂಲೆ, ಸಚಿನ ಶಿರಕೆ ಬಂಧಿತ ಆರೋಪಿಗಳು.

ಇನ್ನು ಆರೋಪಿಗಳು ಮೂಲತಃ ಸೊಲ್ಲಾಪುರದ ಸಾಂಗೋಲೆ ಗ್ರಾಮದವರು. ಅಲ್ಲದೇ, ಸಾಂಗೋಲೆ ನಿವಾಸಿಯಾದ ಚಂದ್ರಕಾಂತ ಮಸ್ಕೆ ಎಂಬುವರು ಆರೋಪಿ ಕಮ್ ಡ್ರೈವರ್ ರಂಜಿತ್ ಜೊತೆಗೆ ವಾಹನದಲ್ಲಿ ಉಮದಿ ಮಾರ್ಗವಾಗಿ ಚಡಚಣಕ್ಕೆ ಅಂಗಡಿ ವಸ್ತುಗಳನ್ನು ಖರೀದಿಸಲು ಹೋಗುತ್ತಿದ್ದ ವೇಳೆಯಲ್ಲಿ ಆರೋಪಿಗಳು ರಾಮಚಂದ್ರಗೆ ಬೆದರಿಸಿ, ಕಣ್ಣಿಗೆ ಖಾರದ ಪುಡಿ ಹಾಕಿ 12.50 ಲಕ್ಷ ದೋಚಿಕೊಂಡು ಪರಾರಿಯಾಗಿದ್ದರು. ಇದೀಗ್ ಪೆÇಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ 12.35 ಲಕ್ಷ, ವಾಹನ, ಮೊಬೈಲ್ ಸಮೇತ ಆರೋಪಿಗಳು ಲಾಕ್ ಆಗಿದ್ದಾರೆ. ಇದರಲ್ಲಿ ಮತ್ತೊಂದು ವಿಷಯ ಏನಂದ್ರೇ ಮಾಲೀಕ ಚಂದ್ರಕಾಂತ ತನ್ನ ವಾಹನ ಡ್ರೈವರ್ ರಂಜಿತ್ ಕೈವಾಡ ಇದೆ ಎನ್ನುವುದು ಕೇಳಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಡ್ರೈವರ್ ರಂಜಿತನ್ನು ಪೆÇಲೀಸ ಬಂಧಿಸಿ ತನಿಖೆಗೆ ಕೈಗೊಂಡಾಗ ಮಾಹಿತಿ ಹೊರಬಿದ್ದಿದೆ. ಚಡಚಣ ಪಿಎ ಸಂಜಯ ತಿಪ್ಪರೆಡ್ಡಿ ಮಿಂಚಿನ ಕಾರ್ಯಕ್ಕೆ ಭೀಮೆಯ ಜನತೆಗೆ ಶಹಭಾಷ್ ವ್ಯಕ್ತಪಡಿಸಿದ್ದಾರೆ. ಚಡಚಣ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.