ರಾಧಾಕೃಷ್ಣನ್ ಕಂಚಿನ ಪುತ್ಥಳಿ ನಿರ್ಮಾಣ- ಶಾಸಕ ರಾಮಚಂದ್ರ

ಜಗಳೂರು.ಸೆ.೬: ಶಿಕ್ಷಕರ ಬೇಡಿಕೆಯಂತೆ ಮುಂದಿನ ವರ್ಷ ಗುರುಭವನದ ಮುಂಭಾಗದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕಂಚಿನ ಪುತ್ಥಳಿ, ಜೊತೆಗೆ ಗ್ರಂಥಾಲಯ ನಿರ್ಮಿಸಲಾಗುವುದು ಎಂದು ಶಾಸಕ ಎಸ್.ವಿ ರಾಮಚಂದ್ರ ಭರವಸೆ ನೀಡಿದರು.ಪಟ್ಟಣದ ಗುರುಭವನದಲ್ಲಿ  ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ 133 ನೇ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಸಮಾರಂಭದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬರದನಾಡಾಗಿದ್ದರೂ ನನ್ನ ಆಡಳಿತಾವಧಿಯಲ್ಲಿ ಸತತ ಮೂರು ಬಾರಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಪ್ರತಿಭಾನ್ವಿತರಿಗೆ ಕೊರತೆಯಿಲ್ಲ. 2ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸುಂದರ ವಿನ್ಯಾಸದ ರಂಗಮAದಿರ ಕಾಮಗಾರಿ ಪ್ರಗತಿಯಲ್ಲಿದೆ. ಸ್ವಯಂಪ್ರೇರಿತವಾಗಿ ಗುರುಭವನ ದುರಸ್ಥಿಗೊಳಿಸಿರುವೆ. ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ಶೀಘ್ರದಲ್ಲಿ ಕೆರೆಗಳು ಭರ್ತಿಯಾಗಲಿವೆ. ಭದ್ರಾಮೇಲ್ದಂಡೆ ಯೋಜನೆ ಶಂಕುಸ್ಥಾಪನೆಯನ್ನು ಮುಂದಿನ ತಿಂಗಳು ದಸರಾ ಹಬ್ಬದೊಳಗಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನೆರೆವೇರಿಸಲಾಗುವುದು. ಮಡ್ರಹಳ್ಳಿ ಚೌಡೇಶ್ವರಿ ಸನ್ನಿಧಿಯಲ್ಲಿ ಗುರುವಂದನಾ: ಚುನಾವಣೆ ಸಂದರ್ಭದಲ್ಲಿ ಶಿಕ್ಷಕರ ಕರ್ತವ್ಯ ಪ್ರಮುಖವಾದದ್ದು. ಅಲ್ಲದೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಲು ಶಿಕ್ಷಕರು ಜ್ಞಾನ ಭಂಡಾರವನ್ನೇ ಧಾರೆ ಎರೆದು ಪ್ರೇರಣೆಯಾಗಿರುವ ಬಡತನದಲ್ಲಿರುವ ಶಿಕ್ಷಕರಿಗೆ ಸದಾ ನೆರವಾಗುವೆ. ನಿವೃತ್ತಿ ಹೊಂದಿದ ನಾಲ್ಕು ಜನ ಶಿಕ್ಷಕರಿಗೆ ನಿವೇಶನ ಕಲ್ಪಿಸಲಾಗುವುದು. ಶೀಘ್ರದಲ್ಲಿ ಮಡ್ರಹಳ್ಳಿ ಚೌಡೇಶ್ವರಿ ಸನ್ನಿಧಿಯಲ್ಲಿ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗುವುದು. ಶಿಕ್ಷಕರು ಕುಟುಂಬ ಸಮೇತರಾಗಿ ಭಾಗವಹಿಸಲು ಮನವಿ ಮಾಡಿದರು.ಕಟ್ಟಕಡೆಯ ಮಗುವಿಗೂ ಗುಣಾತ್ಮಕ ಶಿಕ್ಷಣ: ಬಿಇಓ ದಾರುಕೇಶ್ ಮಾತನಾಡಿ, ಈ ದೇಶದ ಶಿಕ್ಷಣ ತಜ್ಞ ಹಾಗೂ ಮಾಜಿ ರಾಷ್ಟçಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿರುವ ಬಗ್ಗೆ ಸ್ಮರಣೆ ಮಾಡಿಕೊಂಡರು. ಕೊರೋನ ಮಹಾಮಾರಿಗೆ 9 ಜನ ಶಿಕ್ಷಕರು ಬಲಿಯಾಗಿರುವುದು ದುಃಖಕರವಾದ ಸಂಗತಿಯಾಗಿದೆ. ಇದೀಗ 3ನೇ ಅಲೆಯ ಭೀತಿಯ ನಡುವೆ ಒಂದೂವರೆ ವರ್ಷದ ನಂತರ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಹಕಾರದೊಂದಿಗೆ ಶಾಲೆಗಳನ್ನು ಸ್ಯಾನಿಟೈಸ್ ಮಾಡಿಸಲಾಗುತ್ತಿದೆ. ಮಕ್ಕಳ ಯೋಗಕ್ಷೇಮದ ದೃಷ್ಠಿಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪೋಷಕರು ಸಹ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಸಮಾಜದ ಕಟ್ಟಕಡೆಯ ಮಗುವಿಗೂ ಗುಣಾತ್ಮಕ ಶಿಕ್ಷಣ ಸಿಗಬೇಕೆಂಬ ಸದುದ್ದೇಶದಿಂದ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತಮ್ಮ, ಎನ್.ಜಿ.ಓ.ಅಧ್ಯಕ್ಷ ಅಜ್ಯಯ್ಯನಾಡಿಗರ್ ಮಾತನಾಡಿದರು.ನಿವೃತ್ತಿ ಹೊಂದಿದ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರನ್ನು, ಕೋವಿಡ್‌ನಿಂದ ಮರಣ ಹೊಂದಿದ ಶಿಕ್ಷಕರ ಪತ್ನಿ, ಪೋಷಕರನ್ನು, ಎಸ್.ಎಸ್.ಎಲ್.ಸಿ. ಅತಿ ಹೆಚ್ಚು ಅಂಕ ವಿದ್ಯಾರ್ಥಿಗಳನ್ನು, ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಇಂದಿರಾ ರಾಮಚಂದ್ರ, ಇಓ ಲಕ್ಷಿö್ಮಪತಿ, ಮುಖ್ಯಾಧಿಕಾರಿ ಲಾಲ್ಯಾನಾಯ್ಕ್, ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ.ಮಹೇಶ್, ಪ.ಪಂ.ಸದಸ್ಯರಾದ ನವೀನ್, ಪಾಪಲಿಂಗಪ್ಪ, ಮಂಜಣ್ಣ, ಕಾಯಿರೇವಣ್ಣ, ಸರೋಜಮ್ಮ, ಕ್ಷೇತ್ರ ಸಮನ್ವಯಾಧಿಕಾರಿ ವಿ.ಗಿರೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್, ಟಿಹೆಚ್‌ಓ ಡಾ.ನಾಗರಾಜ್, ಶಿಕ್ಷಕರ ಸಂಘದ ಅಧ್ಯಕ್ಷ ಉಲೇಪ್ಪ, ಕಾರ್ಯದರ್ಶಿ ಪ್ರಕಾಶ್, ಸಹಕಾರ್ಯದರ್ಶಿ ಹನುಮಂತೇಶ್ ಸೇರಿದಂತೆ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.