ರಾತ್ರೋರಾತ್ರಿ ವಸತಿ ನಿಲಯಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಅಧಿಕಾರಿ

ದುರಗಪ್ಪ ಹೊಸಮನಿ
ಲಿಂಗಸುಗೂರು.ನ.೧೯-ಲಿಂಗಸುಗೂರು ತಾಲೂಕಿನಲ್ಲಿ ಇರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವರ್ಗದ ವಸತಿ ನಿಲಯಕ್ಕೆ ರಾತ್ರೋರಾತ್ರಿ ಭೇಟಿ ನೀಡಿದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿ ಎಂ ರವರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರದ ನಿಯಮ ಪ್ರಕಾರ ಪ್ರತಿಯೊಬ್ಬ ವಿದ್ಯಾರ್ಥಿಯೂ ಶುದ್ಧ ಕುಡಿಯುವ ನೀರು ಕುಡಿಯಬೇಕು ಹಾಗೂ ಶುಚಿಯಾಗಿ ಮಾಡಿದ ಅಡುಗೆ ಸ್ವಚ್ಚತೆ ಮೋದಲು ಆದ್ಯತೆ ನೀಡಲು ಮುಂದಾಗಬೇಕು ಎಂದು ಸ್ಥಳದಲ್ಲಿ ಇದ್ಧ ಹಟ್ಟಿ ಮೇಟ್ರೀಕ್ ನಂತರ ಬಾಲಕರ ವಸತಿ ನಿಲಯ ವಾರ್ಡ್‌ನ್ ಶರಣಬಸವ ಮಸರಕಲ್ ಇವರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.
ಲಿಂಗಸುಗೂರು ತಾಲೂಕಿನ ಬಹುತೇಕ ವಸತಿ ನಿಲಯದ ವಾರ್ಡ್‌ಗಳು ವಸತಿ ನಿಲಯಕ್ಕೆ ಭೇಟಿ ನೀಡದೆ ಕಾಲಹರಣ ಮಾಡುವ ಮುಖಾಂತರ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣದಿಂದ ವಂಚಿತರಾಗಿದ್ದಾರೆ ಹಾಗೂ ವಸತಿ ನಿಲಯದಲ್ಲಿ ಹಲವು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಾರ್ಡ್ ನ್‌ಗಳು ವಿದ್ಯಾರ್ಥಿಗಳ ತೊಳಲಾಟ ಕೇಳುವ ಇಲ್ಲದೆ ಇರುವುದು ಕಂಡುಬಂದಿದೆ ಎಂಬುದು ನಿನ್ನೆ ೧೮.ರಂದು ಸಂಜೆ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಿಂದ ಪ್ರಭಾವಿತರಾದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಾತೋರಾತ್ರಿ ೭.೩೦ಕ್ಕೆ ಗುರಗುಂಟಾ ಗ್ರಾಮದ ವಸತಿ ನಿಲಯಕ್ಕೆ ಭೇಟಿ ಮತ್ತು ಹಟ್ಟಿ ಮೇಟ್ರಿಕ್ ನಂತರ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರವನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಸರ್ಕಾರದ ಸೌಲಭ್ಯ ಒದಗಿಸಲು ನಿರಾಕರಿಸುವಂತಿಲ್ಲ ತಾಲೂಕಿನ ಎಲ್ಲಾ ವಸತಿ ನಿಲಯದ ವಾರ್ಡ್‌ಗಳಿಗೆ ಆದೇಶವನ್ನು ಶೀಘ್ರದಲ್ಲೇ ನಿಡುತ್ತೇನೆ ಎಂದು ಸಂಜೆ ವಾಣಿ ಪತ್ರಿಕೆಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ರವಿ ಎಂ ರವರು ಹೇಳಿದರು.
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ವಸತಿ ನಿಲಯದ ವಾರ್ಡ್‌ನ್ ಗಳು ವಿಫಲವಾದರೆ ಅಂತಹ ವಸತಿ ನಿಲಯ ಪಾಲಕರ ಮೇಲೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಪತ್ರರವಾನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ಅಂಬೇಡ್ಕರ್ ವಸತಿ ನಿಲಯದ ವಾರ್ಡ್‌ನ್ ಬೇಜವಾಬ್ದಾರಿತನದಿಂದ ನಡೆಯುತ್ತಿರುವ ವಾರ್ಡ್ ನ್ ಮಾರುತಿ ಇವರಿಂದ ವಿನಃ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿಗಳು ದಿ.೧೭ ರಂದು ೫೦ ರಿಂದ ೬೦ ವಿದ್ಯಾರ್ಥಿಗಳು ದೂರು ನೀಡಿದ್ದಾರೆ ಮತ್ತು ಸಂಜೆ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಆಧರಿಸಿ ನಿಮ್ಮ ವಿರುದ್ಧ ಸರ್ಕಾರದ ನಿಯಮ ಪ್ರಕಾರ ಕ್ರಮ ಕೈಗೊಳ್ಳಲು ಜಿಲ್ಲಾ ಉಪನಿರ್ದೇಶಕರಿಗೆ ಪತ್ರ ರವಾನಿಸಲಾಗಿದೆ ಎಂದು ಈಮುಲಕ ಪತ್ರಿಕೆಗೆ ತಿಳಿಸಿದ್ದಾರೆ.