
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.11: ರಾತ್ರಿ 9.30 ರ ವರಗೆ ಕೆಲ ಬೂತ್ ಗಳಲ್ಲಿ ಮತದಾನ ನಡೆದಿದ್ದು. ಒಟ್ಟಾರೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಮತದಾನದ ಅಂತಿಮ ಶೇ ವಾರು ವಿವರ ಈ ರೀತಿ ಇದೆ.
ಅತಿ ಹೆಚ್ಚು ಕಂಪ್ಲಿ ಕ್ಷೇತ್ರಶೇ.84.43 ಇದ್ದು ಅತಿಕಡಿಮೆ ಬಳ್ಳಾರಿ ನಗರ-ಶೇ. 67.96 ಇದೆ
ಉಳಿದಂತೆ ಸಿರಗುಪ್ಪ-ಶೇ.73.30, ಬಳ್ಳಾರಿ ಗ್ರಾಮೀಣ- ಶೇ. 76.10, ಸಂಡೂರು-ಶೇ.77.07 ಇದ್ದು. ಜಿಲ್ಲೆಯ ಸರಾಸರಿ ಶೇ.- 75.47 ಇದೆ. ಇದು ಕಳೆದ ಬಾರಿಗಿಂತ ಶೇ 2.5 ರಷ್ಟು ಹೆಚ್ಚಿದೆ. ಕಾರಣ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ, ಮತದಾರರ ಪಟ್ಟಿ ಪರಿಷ್ಕರಣೆ ಎಂದು ಹೇಳಬಹುದು.
ರಾತ್ರಿವರಗೆ:
ಮತದಾನದ ಸಮಯ ಸಂಜೆ 6 ಗಂಟೆ ಎಂದು ನಿಗಧಿ ಮಾಡಿದ್ದರೂ. ನಗರದ 20 ಕ್ಕೂ ಹೆಚ್ಚು ಬೂತ್ ಗಳಲ್ಲಿ ರಾತ್ರಿ 9.30 ರ ವರಗೆ ಮತದಾನ ನಡೆದಿದೆ.
ನಗರದ ಎಪಿಎಂಸಿ, ಶ್ರೀರಾಂಪುರ ಕಾಲೋನಿ, ಪವನ್ ಹೊಟೆಲ್ ಹಿಂಭಾಗ, ಮಿಲ್ಲರ್ ಪೇಟೆ ಮೊದಲಾದ ಬೂತ್ ಗಳಲ್ಲಿ ಒಂದು ಪಕ್ಷದವರು ತಮಗೆ ಹಣ ನೀಡಿಲ್ಲ ಎಂದು ಮತದಾನ ಮಾಡದೇ ಕುಳಿತಿದ್ದರು. ಆದರೆ ಹಣ ಕೊಟ್ಟಿದ್ದ ಇನ್ನೆರೆಡು ಪಕ್ಷದ ಕಾರ್ಯಕರ್ತರು ಅವರು ನೀಡದಿದ್ದರೇನು, ನಾವು ಕೊಟ್ಟಿದ್ದೇವೆಲ್ಲ ಬನ್ನಿ ಸಮಯುಗಿಯುತ್ತೆ ಎಂದು ಮನೆ ಮನೆ ತಿರುಗಿ ಹೇಳಿದ ಮೇಲೆ ಒಂದೊಂದು ಮತ ಗಟ್ಟೆಗೆ 200 ರಿಂದ 350 ಕ್ಕೂ ಹೆಚ್ಚು ಮತದಾನ ಮಾಡಲು ಮತಗಟ್ಟೆ ಕೇಂದ್ರಕ್ಕೆ ಬಂದು ಸರದಿ ಸಾಲಿನಲ್ಲಿ ನಿಂತಿದ್ದರು. ಅದರಲ್ಲಿ ಪುರುಷರ ಸಂಖ್ಯೆ ಹೆಚ್ಚಿತ್ತು. ಮದ್ಯ ಮಾರಾಟ ನಿಷೇಧ ಮಾಡಿದ್ದರೂ ಬಹುತೇಕರು ಘಮ ಘಮಿಸುತ್ತಿದ್ದರು.