ರಾತ್ರಿ 9 ಗಂಟೆಯ ನಂತರ ಹೊರಗೆ ಬರಬೇಡಿ

ವಾಡಿ:ಎ.22: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಠಿಣ ನಿಯಮ ಜಾರಿಗೊಳಿಸಿದ್ದು, ರಾತ್ರಿ 9ರ ನಂತರ ಮನೆಯಿಂದ ಯಾರು ಹೊರಗಡೆ ಬರಬಾರದು, ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು ಎಂದು ಪಿಎಸ್‍ಐ ವಿಜಯಕುಮಾರ ಬಾವಗಿ ಮನವಿ ಮಾಡಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150ರ ಅಕ್ಕ-ಪಕ್ಕದಲ್ಲಿರುವ ಅಂಗಡಿ ಮಾಲೀಕರಿಗೆ, ವ್ಯಾಪಾರಸ್ಥರಿಗೆ, ಜನರಿಗೆ ಕೋವಿಡ್ ತಡೆಯುವಲ್ಲಿ ಸಹಕಾರ ನೀಡಬೇಕೆಂದು ಹೇಳಿದರು.

ರಾಜ್ಯ ಸರ್ಕಾರ ಸೆಮಿ, ಲಾಕ್‍ಡೌನ್, ನೈಟ್ ಕಪ್ರ್ಯೂ ಜಾರಿಗೊಳಿಸಿದ್ದು, ವೈದ್ಯಕೀಯ ಸೇವೆ ಅವಶ್ಯಕತೆ ಇದ್ದರೇ ಮಾತ್ರ ಹೊರಗಡೆ ಬರಬೇಕು. ಸುಮ್ಮನೆ ಹೊರಗಡೆ ಬಂದರೇ ಹೊಡೆಯುವುದಾಗಿ, ನಿಂದಿಸುವುದಾಗಲೀ ಮಾಡುವುದಿಲ್ಲ, ನೇರವಾಗಿ ಎಫ್‍ಐಆರ್ ದಾಖಲು ಮಾಡುತ್ತೆವೆ ಎಂದು ಎಚ್ಚರಿಸಿದರು.

ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ 6 ಗಂಟೆಯವರೆಗೆ ಕಂಪ್ಲೀಟ್ ಬಂದ್ ಇರುತ್ತದೆ. ಬಂದ್ ಬಿಟ್ಟು ಉಳಿದ ಬೆಳಗ್ಗಿನ ಸಮಯದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ವಹಿವಾಟು ಮಾಡಲು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಪ್ರೋಬೇಷನರಿ ಪಿಎಸ್‍ಐ ದೇವಿಂದ್ರರೆಡ್ಡಿ, ವಿಶೇಷ ಪೇದೆ ದೊಡ್ಡಪ್ಪ ಪೂಜಾರಿ ಇದ್ದರು.